ಜೈಕನ್ನಡಿಗರ ಸೇನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪಾರು ಧಾರವಾಹಿ ನಟಿ ಮೋಕ್ಷಿತಾ

ಕಲಬುರಗಿ,ನ.28- ಜೈಕನ್ನಡಿಗರ ಸೇನೆ ಆಶ್ರಯದಲ್ಲಿ ನಾಳೆ ನ.29ರ ಬೆಳಿಗ್ಗೆ 11ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಪಾರು” ಧಾರವಾಹಿಯ ನಟಿ ಮೋಕ್ಷಿತಾ ಅವರು ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ಸಾನಿದ್ಯವನ್ನು ಅಚಲೇರಿ ಜಿಡಗಾಮಠದ ಪೂಜ್ಯ ಷಡಕ್ಷರಿ ಬಸವರಾಜೇಂದ್ರ ಸ್ವಾಮಿಜಿ ಹಾಗೂ ಶ್ರೀಕ್ಷೇತ್ರ ಸರಡಗಿಮಠದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ವಹಿಸುವರು ಎಂದು ಜೈಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್.ಭಾಸಗಿ ಮತ್ತು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಡಾ.ಅಜಯಸಿಂಗ್ ಅವರು ತಾಯಿ ಕನ್ನಡಾಂಬೆ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು ಈ ಕಾರ್ಯಕ್ರಮದಲ್ಲಿ ಜನಪ್ರೀಯ “ಪಾರು” ಧಾರಾವಾಹಿಯ ನಟಿ ಮೋಕ್ಷಿತಾ ಅವರು ಪಾಲ್ಗೋಳ್ಳÀಲಿದ್ದಾರೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಚಂದು ಪಾಟೀಲ, ಶಾಸಕರಾದ ಡಾ.ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಖನಿಜ ಫಾತಿಮಾ, ಶಶೀಲ ನಮೋಶಿ, ಮಾಜಿ ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಸ್ವಾಮಿರಾವ ಕುಲಕರ್ಣಿ (ಸಾಹಿತ್ಯ), ಲಕ್ಷ್ಮಣ ದಸ್ತಿ (ಹೋರಾಟ), ಶ್ಯಾಮರಾವ ಪ್ಯಾಟಿ (ರಾಜಕೀಯ), ಡಾ.ಭದ್ರಶೆಟ್ಟಿ ಎ.ಎಸ್. (ಆಡಳಿತ), ಅದಿನಾಥ ಹೀರಾ (ಕೃಷಿ), ಪ್ರಭುಲಿಂಗ ನೀಲೂರ ಮತ್ತು ಶರಣಯ್ಯ ಹಿರೇಮಠ (ಮಾಧ್ಯಮ), ರೋಹನಕುಮಾರ (ಸಮಾಜ ಸೇವೆ) ಇವರೆಲ್ಲರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಗಣ್ಯಮಾನ್ಯರು ಪ್ರದಾನ ಮಾಡಲಿದ್ದಾರೆ. ಅಲ್ಲದೇ ಸಂಘಟನೆಯ ಅಮೂಲ್ಯ ಸೇವಾ ರತ್ನ ಪ್ರಶಶ್ತಿಯನ್ನು ವಿವಿಧ ಸಾಧಕರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ನೂರ ಹುಸೇನ್, ಶಿವು ಮಡಕಿ, ವಿಠ್ಠಲ ಪೂಜಾರಿ, ಆಕಾಶ ಚವ್ಹಾಣ, ನೀಲಕಂಠ ಮಂತ್ರಿ ಸೇರಿದಂತೆ ಹಲವರಿದ್ದರು.