ಜೈಕನ್ನಡಿಗರ ಸೇನೆಯಿಂದ ರಾಜ್ಯೋತ್ಸವ

ಕಲಬುರಗಿ,ನ.1- ತಾಯಿ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಿ ಮತ್ತು ಗೌರವಿಸುವಂತೆ ಬ್ಲಾಕ ಕಾಂಗ್ರೆಸ ಸಮಿತಿ ಅಧ್ಯಕ್ಷ ನೀಲಕಂಠರಾವ ಮೂಲಗೆ ಅವರು ಕರೆ ನೀಡಿದರು.
ನಗರದ ಸರ್ದಾರ ವಲ್ಲಭಬಾಯಿ ಪಟೇಲ ವೃತ್ತದಲ್ಲಿಂದು ಜೈ ಕನ್ನಡಿಗರ ಸೇನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೈಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ದತ್ತು ಎಚ್.ಭಾಸಗಿ ಅವರು, ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳು ಕನ್ನಡ ನಾಡು ನುಡಿ ರಕ್ಷಣೆಗಾಗಿ ಸೇನೆಯಂತೆ ಕಾರ್ಯನಿರ್ವಹಿಸಬೇಕು. ನಾಡಿನ ನೆಲಜಲ ಹಾಗೂ ಕನ್ನಡ ಭಾಷೆಯ ರಕ್ಷಣೆಗಾಗಿ ಬೀದಿಗಿಳಿಯಲು ಹಿಂಜರಿಯಬಾರದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ, ಮಾಜಿ ಮೇಯರ ಶರಣಕುಮಾರ ಮೋದಿ, ಪಿಎಸ್‍ಐ ಅಮುಶುಬ ಕುಮಾರ, ಆನಂದ ಕಿಶೋರ, ಸಂಜುಕುಮಾರ ಮಾಳಗೆ, ಪ್ರಶಾಂತ ಬಾಪುನಗರ, ಅಂಬಾರಾಯ ಯಾದವ, ನಿತೇಶ ಮುಗನೂರ ಸೇರಿದಂತೆ ಹಲವುಜನ ಗಣ್ಯಮಾನ್ಯರು ಭಾಗವಹಿಸಿದ್ದರು.