ಜೇಸಿ ಸಪ್ತಾಹಕ್ಕೆ ಚಾಲನೆ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಿಳಾ ಸಾಧಕಿಯರಿಗೆ ಗೌರವ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ12: ಜೇಸಿ ಸಪ್ತಾಹಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದ್ದು ವಾರಪೂರ್ತಿ ವೈವಿದ್ಯಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶನಿವಾರ ಚಾಲನೆ ದೊರೆತ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಸ್ಥಳೀಯ ನೆಹರೂ ಕಾಲೋನಿಯಲ್ಲಿ 4ಜನ ಮಹಿಳೆಯರು ರುಚಿ ಹಾಗೂ ಸುಚಿಯಾದ ಆಹಾರ ಪದಾರ್ಥಗಳನ್ನು ಸಿದ್ದಪಡಿಸುವ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದು  ಸ್ವಯಂ ಉದ್ಯೋಗಕ್ಕೆ ಮಾದರಿಯಾಗುವಂತೆ ನಡೆಸುತ್ತಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕಾವೇರಿ ಹಾಗೂ ನಾಲ್ವರು ಮಹಿಳೆಯರನ್ನು ಗೌರವಿಸುವ ಮೂಲಕ ಜೇಸಿ ಸಪ್ತಾಹಕ್ಕೆ ಚಾಲನೆ ನೀಡಿದರು.
ಅಧ್ಯಕ್ಷ ಡಾ.ಕೆ.ವಿ. ವಿಜಯಕುಮಾರ ಮಾತನಾಡಿ ಜೇಸಿ ಸಪ್ತಾಹದ ಅಂಗವಾಗಿ ಮಹಿಳೆ, ಯುವಜನ ಸ್ಪೂರ್ತಿದಾಯ ಕಾರ್ಯಕ್ರಮ, ಸದಸ್ಯತ್ವ ಅಭಿಯಾನ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ಸಪ್ತಾಹವನ್ನು ನಡೆಸುತ್ತಿರುವುದಾಗಿ ಮತ್ತು ಕರೋನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಉಚಿತ ಮಾಸ್ಕ್ ಹಂಚಿಕೆ, ಸಾಮಾಜಿಕ ಅಂತರದೊಂದಿಗೆ ಪಾಲಿಸದ ಬೇಕಾದ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು ಸಪ್ತಾಹದ ಉದ್ದೇಶವಾಗಿದೆ ಎಂದರು.
ಕಾರ್ಯದರ್ಶಿ ಹರೀಶ ಬಡಿಗೇರ್, ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.