ಜೇವರ್ಗಿ ವಿಧಾನ ಸಭಾ ಕ್ಷೇತ್ರ | ಚುನಾವಣಾ ತಾಲೂಕಾ ಸ್ವೀಪ್ ಸಮಿತಿಯಿಂದ ಬೈಕ್ ರ್ಯಾಲಿಶೇ.100 ರಷ್ಟು ಈ ಬಾರಿ ಮತದಾನವಾಗಲಿ: ಶಾಂತಗೌಡ

ಕಲಬುರಗಿ:ಎ.4: ಯಾವುದೆ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ಜೇವರ್ಗಿ ತಾಲೂಕಾ ಚುನಾವಣಾಧಿಕಾರಿ ಶಾಂತಗೌಡ ರವರು ಹೇಳಿದರು.

ಜೇವರ್ಗಿ ಪಟ್ಟಣದಲ್ಲಿ ಸೋಮವಾರ ಕರ್ನಾಟಕ ವಿಧಾನ ಸಭಾ ಚುನಾವಣೆ ತಾಲೂಕಾ ಸ್ವೀಪ್ ಸಮಿತಿಯು ಇಲ್ಲಿನ ರಿಲಾಯನ್ಸ್ ಪೆಟ್ರೋಲ್ ಬಂಕ್‍ನಿಂದ ಮಿನಿ ವಿಧಾನ ಸೌಧದ ತಹಸೀಲ್ ಕಚೇರಿಯ ವರೆಗೆ ಹಮ್ಮಿಕೊಂಡಿರುವ ಮತದಾರರ ಮತದಾನ ಜಾಗೃತಿ ಅಭಿಯಾನ ಬೈಕ್ ಜಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು, ಮಾತನಾಡಿದರು. ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತಾತ್ಮಕ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಲು ಸಂವಿಧಾನ ಪ್ರದತ್ತವಾಗಿ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಮತದಾರ, ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮತದಾರರಿಗೆ ಸಲಹೆ ನೀಡಿದರು.

ನಂತರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ ಅವರು ಮಾತನಾಡಿ ಯಾವುದೆ ಜಾತಿ, ಜನಾಂಗ, ಮತ, ಭಾಷೆ ಮತ್ತು ಹಣದ ಆಮಿಷಕ್ಕೆ ಪ್ರಭಾವಿತರಾಗದೆ ನ್ಯಾಯ ಸಮ್ಮತ ಮತ ಚಲಾಯಿಸಬೇಕು ಎಂದು ಹೇಳಿದರು.

ಬಳಿಕ ತಾಲೂಕಾ ತಹಸಿಲ್ದಾರ್ ಶ್ರೀ ಮತಿ ರಾಜೇಶ್ವರಿ ಅವರು, ಮಾತನಾಡುತ್ತ ಕಳೆದ ಬಾರಿ ವಿಧಾನ ಸಭಾ ಚುನಾವಣೆ ಗಮಿನಿಸಿದರೆ ಮತದಾನದ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಿರುವುದಿಲ್ಲ. ಆದ್ದರಿಂದ ಈ ಬಾರಿ ಮತದಾರರಿಗೆ ಮತದಾನದ ಅರಿವು ಮೂಡಿಸಲು ತಾಲೂಕಾ ಸ್ವೀಪ್ ಸಮಿತಿಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ರಿಲಾಯನ್ಸ್ ಪಟ್ರೋಲ್ ಬಂಕ್ ನಿಂದ ಪ್ರಾರರಂಭಗೊಂಡ ಬೈಕ್ ರ್ಯಾಲಿ ಮತದಾನ ಮಹತ್ವದ ಕುರಿತು ಸ್ಲೋಗನ್ ಗಳನ್ನು ಹೇಳುತ್ತ ವಿಜಯಪುರ ಕ್ರಾಸ್ ವೃತ್ತದ ಮೂಲಕ ಹಾದು ಮಿನಿ ವಿಧಾನ ಸೌಧದಕ್ಕೆ ಬಂದು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಬೈಕ್ ಜಾತಾ ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ತಾಲೂಕಾ ಸಹಾಯಕ ನಿರ್ದೇಶಕ ಸೋಮಶೆಖರ ಜಾಡರ್, ತಾ.ಪಂ ವ್ಯವಸ್ಥಾಪಕ ಸುಭಾಷ್ ಹೊಸಮನಿ, ಪಂ.ರಾ ಸಹಾಯಕ ನಿರ್ದೇಶಕ ಪ್ರಸನ್ನಾತ್ಮ ಬಿ., ತಾ.ಪಂ. ಲೆಕ್ಕ ಸಹಾಯಕ ಅಧಿಕಾರಿ ಈರಣ್ಣ ದೋತ್ರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ನಾಯಕ, ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ. ಪಾಟೀಲ, ಸಿ.ಡಿ.ಪಿ.ಒ ದೀಪಿಕಾ ಬಿ.ವಿ, ಬಿ.ಸಿ.ಎಂ. ಇಲಾಖೆ ಅಧಿಕಾರಿ ಮಹ್ಮದ್‍ಯುನಸ್, ಅಕ್ಷರ ದಾಸೋಹ ಸಹಾಯಕ ನಿದೇಶಕಿ ಮಹಾದೇವಿ ಶಿವಸಿಂಪಿ, ಇ.ಎಸ್.ಟಿ ಗುರುರಾಜ್ ಕುಲಕ್ಕರ್ಣಿ, ವಿಷಯ ನಿರ್ವಾಹಕರಾದ ಹಣಮಂತ್ರಾಯ ಬುದಿಹಾಳ, ಮಾಳಪ್ಪ, ಐಇಸಿ ಸಂಯೋಜಕ ಚಿದಂಬರ ಪಾಟೀಲ, ಟಿ.ಸಿ ಸಂತೋಷ ತಡಿಬಿಡಿ, ಎಂ.ಐ.ಎಸ್. ಸತೀಶ ಬುದಿಹಾಳ, ತಾಂತ್ರಿಕ ಸಹಾಯಕರಾದ ಸ್ನೇಹಿತ್ ಹರನಾಳ, ಶಶಿಕಾಂತ ಬಿರಾದರ, ರಮೇಷ ಪವಾರ್, ಶಶಿಕಾಂತ ನಂದೂರ, ಯಾಸ್ಮಿನ್ ಹಾಗೂ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ಕರ ವಸೂಲಿಗಾರರು, ಬಿ.ಎಫ್.ಟಿಗಳು, ಕ್ಷೇತ್ರ ಸಹಾಯಕರು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕಾ ಆಡಳಿತಕ್ಕೆ ಒಳಪಡುವ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.