ಜೇವರ್ಗಿ: ರಥದ ಚಕ್ರಕ್ಕೆ ಸಿಲುಕಿ ಇಬ್ಬರಿಗೆ ಗಂಭೀರ ಗಾಯ

ಜೇವರ್ಗಿ,ಮೇ.29-ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಸಹಸ್ರಾರು ಭಕ್ತರ ಜಯಘೋಷದ ಮಧ್ಯೆ ವೈಭವದ ರಥೋತ್ಸವ ಜರುಗಿತು.
ರಥೋತ್ಸವದ ವೇಳೆ ರಥದ ಚಕ್ರಕ್ಕೆ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಕಾಶ ಕೋಳಕೂರ ಹಾಗೂ ಷಣ್ಮುಖ ಬಸವಪಟ್ಟಣ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.