ಜೇವರ್ಗಿ ಮತಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರ ಭೇಟಿ,ಚುನಾವಣೆ ಕೆಲಸ ಕಾರ್ಯಗಳ ಪರಿಶೀಲನೆ

ಕಲಬುರಗಿ:ಏ.29: ಗುಲಬರ್ಗಾ ಲೋಕಸಭೆಯ ದಸರಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಅವರು ಸೋಮವಾರ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಚುನಾವಣೆ ಕೆಲಸ ಕಾರ್ಯಗಳ ಕುರಿತು ಪರಿಶೀಲಿಸಿದರು.

ಜೇವರ್ಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ‌ ವಿವಿಧ ಪರವಾನಿಗೆ ನೀಡುವ ಸಿಂಗಲ್‌ ವಿಂಡೋ ಸಿಸ್ಟಮ್ ತಂಡ, ಲೆಕ್ಕ ಪತ್ರ ತಂಡ, ವಿಡಿಯೋ ವೀವಿಂಗ್ ತಂಡ, ಕಂಟ್ರೋಲ್ ರೂಂ ತಂಡಗಳ ಕಾರ್ಯವೈಖರಿ ಕುರಿತು ಖುದ್ದಾಗಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಮತದಾನ ದಿನ ಮಾನಿಟರಿಂಗ್ ಕುರಿತು ಐ.ಟಿ. ತಂಡಕ್ಕೆ ನೀಡಲಾಗುತ್ತಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಐ.ಟಿ. ಸಿಬ್ಬಂದಿ ಉದ್ದೇಶಿಸಿ ಮಾತನಾಡಿದರು. ಕ್ಷೇತ್ರದ ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಆಂದೋಲ ಗ್ರಾಮದ ವಲನರೇಬಲ್, ಕೆಲ್ಲೂರು ಗ್ರಾಮದ ಕ್ರಿಟಿಕಲ್ ಮತಗಟ್ಟೆ ವೀಕ್ಷಿಸಿದ ಅವರು ಚಿಗರಳ್ಳಿ ಕ್ರಾಸಿನಲ್ಲಿರುವ ಚೆಕ್ ಪೋಸ್ಟ್ ಕೇಂದ್ರಕ್ಕೂ ಭೇಟಿ ನೀಡಿ ವಾಹನ ತಪಾಸಣಾ ಕಾರ್ಯ ವೀಕ್ಷಿಸಿದರು. ಕ್ಷೇತ್ರದ ಸಹಾಯಕ‌ ಚುನಾವಣಾಧಿಕಾರಿ ಕೃಷ್ಣಾ ಜೊತೆಗಿದ್ದರು.