ಜೇವರ್ಗಿ ಬಿಇಒ ವಿರುದ್ಧ ಕ್ರಮಕ್ಕೆ ಒತ್ತಾಯ

ಕಲಬುರಗಿ :ನ.21: ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ವೆಂಕಯ್ಯ ಇನಾಮದಾರ ಅವರು ಆರ್‍ಟಿಇ ಹಣ ಮರುಪಾವತಿ, ಅಧಿಕಾರಿ ದರ್ಬಳಕೆ ಮತ್ತು ತಾಲೂಕಿನ ಶಿಕ್ಷಕರಿಗೆ ಕಿರುಕುಳ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವೆಂಕಯ್ಯ ಅವರು ಶಹಾಪುರ ತಾಲ್ಲೂಕಿನಲ್ಲಿ ಬಿಇಒ ಇದ್ದಾಗ ಅಲ್ಲಿನ ಶಿಕ್ಷಕರ ಸಂಘದ ಅಧ್ಯಕ್ಷ ಪಂಪನಗೌಡ ಅವರನ್ನು ಶಿಕ್ಷಕರ ಪರವಾಗಿ ಧ್ವನಿ ಎತ್ತದಂತೆ ಅಮಾನತು ಮಾಡಿದ್ದಾರೆ. ಆಳಂದ ಬಿಇಒ ಆಗಿದ್ದಾಗಲೂ ಅಲ್ಲಿನ ಪ್ರಧಾನ ಕಾರ್ಯದರ್ಶಿಗಳಾದ ನರಸಪ್ಪ ಬಿರಾದಾರ ಅವರ ವಾರ್ಷಿಕ ಬಡ್ತಿ ತಡೆ ಹಿಡಿದಿದ್ದಾರೆ. ಸಂಘದ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಬಿಇಓ ಅವರು ಜೇವರ್ಗಿ ತಾಲ್ಲೂಕಿನ ನಿವಾಸಿಯಾಗಿದ್ದು, ಶಿಕ್ಷಣಾಧಿಕಾರಿಗಳ ವರ್ಗಾವಣೆ ಕಾಯ್ದೆಯಂತೆ ಅಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂದು ನಿಯಮವಿದೆ. ಆದರೂ ನಿಯಮ ಉಲ್ಲಂಘಿಸಿ ಸ್ಥಳ ನಿಯುಕ್ತಿ ಮಾಡಲಾಗಿದೆ. ಶಿಕ್ಷಕರ ಸಂಘದ ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷ ಮರೆಪ್ಪ ಮೂಲಿಮನಿಯವರನ್ನು ವಿನಾಕಾರಣ ದುರುದ್ದೇಶದಿಂದ ಅಮಾನತು ಮಾಡಿದ್ದಾರೆ. ಸದ್ಯ ವೈದ್ಯಕೀಯ ರಜೆಯ ಮೇಲಿರುವ ಅಧ್ಯಕ್ಷರ ಹೇಳಿಕೆಯನ್ನು ಪರಿಗಣಿಸದೇ ಸಿಸಿಎ ನಿಯಮಗಳನ್ನು ಅಮಾನತು ಮಾಡಿರುವುದು ದುರದೃಸ್ಟಕರ ಎಂದಿದ್ದಾರೆ. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲಯ್ಯ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ನಾಗನಾಥ ಬೋಸಲೆ, ಪ್ರಮುಖರಾದ ಸಂತೋಷ ಸಲಗರ, ಪರಮೇಶ್ವರ ಬಿ.ದೇಸಾಯಿ, ಶೀವಪುತ್ರ ಕರಣಿಕ, ಶಿವಾನಂದ ನಾಲವಾರ, ಬಸವರಾಜ ಬಳೂಂಡಗಿ, ಮಹಾಂತೇಶ ಪಂಚಾಳ, ಸಂತೋಷ ಕಲಮುಡಕರ್, ಶೇಖ ಮುಜೀಬ, ಅಶೋಕ ಸೋನ್ನ, ನವನಾಥ ಶಿಂದೆ, ಈಶ್ವರಗೌಡ, ದೇವಿಂದ್ರ ಗಣಮುಕ, ಗಂಗಾಧರ, ನಾಗಪ್ಪ ನೆಲೋಗಿ, ಪ್ರಲ್ಹಾದ, ಸೂರ್ಯಕಾಂತ ದೋಡ್ಡಮನಿ, ಭೀಮಾಶಂಕರ, ಮಹಬೂಬ ಮಡಕಿ, ಪರಮೇಶ್ವರ ಬಿರಾದಾರ, ಮಹಾದೇವಿ ಬಿರಾದಾರ, ತಿಪ್ಪಣ್ಣಾ ಕಚೇರಿ ಇದ್ದರು.