ಜೇವರ್ಗಿ ಪುರಸಭೆ ಬಿಜೆಪಿ ಮಡಲಿಗೆ

ಜೇವರ್ಗಿ,ನ.7-ತೀವ್ರ ಕುತೂಹಲ ಕೆರಳಿಸಿದ್ದ ಜೇವರ್ಗಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರ ಮೂಲಕ ಅಧಿಕಾರದ ಗದ್ದುಗೆಯನ್ನೇರಿದೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರಾಗಿ ಕಸ್ತೂರಿಬಾಯಿ ಕಲ್ಲಾ, ಉಪಾಧ್ಯಕ್ಷರಾಗಿ ರಾಜು ರದ್ದೇವಾಡಗಿ ಅವಿರೋಧ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ರಮೇಶ್ ಬಾಬು ವಕೀಲ್, ಮಲ್ಲಿನಾಥ ಗೌಡ ಯಲಗೋಡ, ಬಿಜೆಪಿ ತಾಲೂಕು ಅಧ್ಯಕ್ಷ ಭೀಮರಾಯ ಗುಜಗುಂಡ, ಅಶೋಕ್ ಸಾಹು ಗೋಗಿ, ಧರ್ಮಣ್ಣ ದೊಡ್ಮನಿ, ಶೋಭಾ ಬಾಣಿ, ಬಾಬು ಬಿ. ಪಾಟೀಲ, ಪುಂಡಲಿಕ ಗಾಯಕ್ವಾಡ ಸೇರಿದಂತೆ ಮತ್ತಿತರರು ಇದ್ದರು.