ಜೇವರ್ಗಿ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕಸ್ತೂರಿಬಾಯಿ ಕಲ್ಲಾ

ಜೇವರ್ಗಿ:ನ.11: ಪಟ್ಟಣದ ಪುರಸಭೆಯು ಎರಡು ವರ್ಷ ಮೂರು ತಿಂಗಳಿಂದ ಸದಸ್ಯರಿಗೆ ಅಧಿಕಾರವಿಲ್ಲದೆ ಪಟ್ಟಣದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದವು ಮುಂದಿನ ದಿನಗಳಲ್ಲಿ ಪಟ್ಟಣದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ ಹೇಳಿದರು.

ಪಟ್ಟಣದ ಪುರಸಭೆ ಕಛೇರಿಯಲ್ಲಿ ನೂತನವಾಗಿ ಅಧ್ಯಕ್ಷೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧ್ಯಕ್ಷೆರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಕೆಲಸ ಮಾಡುವೆ, ಪಟ್ಟಣದಲ್ಲಿ ಕುಡಿಯುವು ನೀರಿನ ಸಮಸ್ಯ, ಬೀದಿ ದೀಪಗಳು, ಸಿಸಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನೂತನ ಪುರಸಭಯ ಉಪಾಧ್ಯಕ್ಷರಾದ ರಾಜು ರದ್ದೇವಾಡಗಿ, ಅಶೋಕ ಸಾಹು ಗೋಗಿ, ಷಣ್ಮುಖಪ್ಪ ಸಾಹು ಗೋಗಿ, ಗುರುಶಾಂತಯ್ಯ ಹಿರೇಮಠ, ಗುಂಡು ಸಾಹು ಗೋಗಿ, ಸಂಗಣಗೌಡ ಪಾಟೀಲ್ ರದ್ದೇವಾಡಗಿ, ಗುರು ಮಾಲಿ ಪಾಟೀಲ್, ಸಂತೋಷ ಮಲ್ಲಾಬಾದ, ಚಂದನ್ ಮಹೇಂದ್ರಕರ್, ಸಿದ್ರಾಮ ಯಳಸಂಗಿ, ಜೆಟ್ಟೆಪ್ಪ ಮಂದ್ರವಾಡ, ಖಯೂಮ್, ವಿಜಯಕುಮಾರ ನರಿಬೋಳ, ಹಣಮಂತ ಶಾಹಾಬಾದ, ಸಂಗಮೇಶ ಕೊಂಬಿನ್, ಅಮೀರ ಸೇಠ, ರಾಜು ತಳವಾರ, ಪರಸುರಾಮ ದೊಡ್ಮನಿ, ದೇವಿಂದ್ರ ಸುಭೇದಾರ, ತಿಪ್ಪಣ್ಣ ಕನಕ ಸೇರಿದಂತೆ ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.