ಜೇವರ್ಗಿ ; ನವಭಾರತ ಕಾಲೇಜಿಗೆ ರೈತರ ಮಕ್ಕಳೇ ಟಾಪರ್

ಕಲಬುರಗಿ ; ಎ.26:ವಿದ್ಯಾರ್ಥಿಗಳ ಜೀವನದ ಮುಖ್ಯ ಮೈಲುಗಲ್ಲಾದ ದ್ವಿತೀಯ ಪಿಯುಸಿ ಶಿಕ್ಷಣವನ್ನು ಉತ್ತಮ ದರ್ಜೆಯಲ್ಲಿ ರೈತರ ಮಕ್ಕಳು ಟಾಪರ್ ಆಗಿ ತೇರ್ಗಡೆಯಾಗುವುದರೊಂದಿಗೆ ಅಭೂತಪೂರ್ವ ಯಶಸ್ಸು ಖಂಡಿದ್ದು ತುಂಬಾ ಹೆಮ್ಮೆಯ ವಿಷಯ ಎಂದು ಕಾಲೇಜಿನ ಅಧ್ಯಕ್ಷರಾದ ಖಾಜಾ ಅಬ್ದುಲ್ ಮಾಜೀದ್ ಅವರು
ಅಭಿಪ್ರಾಯ ಪಟ್ಟಿದ್ದಾರೆ.

ಜೇವರ್ಗಿ ನಗರದ ಶಾಹಾಪೂರ ರಸ್ತೆಯ , ಜುಬ್ಲಿ ಪೆಟ್ರೋಲ್ ಪಂಪ್ ಹಿಂದುಗಡೆಯಿರುವ ನವ ಭಾರತ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದಾಖಲೆ ಅಂಕಗಳು ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಸಹಕಾರ ಹಾಗೂ ಪ್ರಾಚಾರ್ಯರ ವೃಂದದ ಸತತ ಪ್ರಯತ್ನದಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಷ್ಟೊಂದು ದೊಡ್ಡಮಟ್ಟದ ಯಶಸ್ಸು ಕಂಡು ಕಾಲೇಜಿನ ಕೀರ್ತಿ ಹೆಚ್ಚಿಸಲು ಸಾದ್ಯವಾಗಿದೆ ಎಂದು ಮಾಜೀದ್ ತಿಳಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಕೂಡಾ ನವ ಭಾರತ ವಿಜ್ಞಾನ ಕಾಲೇಜು ಅಗ್ರಶ್ರೇಣಿಯ ಫಲಿತಾಂಶವನ್ನು ನೀಡುವುದರಲ್ಲಿ ದೊಡ್ಡ ಗಾತ್ರದ ಯಶಸ್ಸು ಕಂಡಿದೆ. ಪ್ರಸ್ತುತ 2023 ರ ಸಾಲಿನ ದ್ವಿತೀಯ ಪಿಯುಸಿ ಫಲತಾಂಶದಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದ
ರೈತರ ಮಕ್ಕಳು ಮೇಲುಗೈ ಸಾಧಿಸಿದ್ದು, ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರದ ಹಮೀದ್ ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆಕಾಡೆಮಿ ಪ್ರಾಂಶುಪಾಲರು ಸರ್ವೋತ್ತಮ ಕುಲಕರ್ಣಿ,
ಪ್ರಾಚಾರ್ಯರಾದ ಚೇತನ್ ರಾಠೋಡ,ಮೋಹನ ಕುಮಾರ್, ವಿಶ್ವನಾಥ, ಪಾಲಕರು ಹಾಗೂ ಕಾಲೇಜಿನ ನೆಚ್ಚಿನ ವಿದ್ಯಾರ್ಥಿಗಳು ಹಾಜರಿದ್ದರು.


ಎಸ್.ಎಸ್.ಎಲ್.ಸಿ ನಂತರ ಎರಡು ತಿಂಗಳು ತಡವಾಗಿ ನವ ಭಾರತ ಕಾಲೇಜಿಗೆ ಪ್ರವೇಶವನ್ನು ಪಡೆದುಕೊಂಡ ನನಗೆ ಸೈನ್ಸ್ ಅಂದರೆ ಬಹಳ ಭಯವಿತ್ತು. ನನಗಿದ್ದ ಭಯವನ್ನು ಅಲ್ಲಿನ ನುರಿತ ಪ್ರಾಚಾರ್ಯರು ನೀಡಿದ ಸಲಹೆಯಿಂದ ನಾನು ಎಲ್ಲಾ ವಿಷಯಗಳ ಬಗ್ಗೆ ಸರಾಗವಾಗಿ ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಓದಲು ಪ್ರಾರಂಭಿಸಿದೆ. ನಮ್ಮಂಥ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನವಭಾರತ ಕಾಲೇಜು ಸೂಕ್ತವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉತ್ತೀರ್ಣರಾಗಲು ಕಾಲೇಜಿನ ಆಡಳಿತ ಮಂಡಳಿ ಹಾಗೂ ನನ್ನೆಲ್ಲಾ ಗುರುಗಳು ನೀಡಿದ ಸಹಕಾರಕ್ಕೆ ಸದಾ ಚಿರರುಣಿಯಾಗಿದ್ದೇನೆ.

-ಮಹಿಬೂಬಸಾಬ್ ಕನ್ನೊಳ್ಳಿ
ಡಿಸ್ಟಿಕ್ಷನ್ ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿ, ಜೇವರ್ಗಿ.