
ಕಲಬುರಗಿ: ನ.20: ಮತದಾರರ ದಿನಾಚರಣೆ’ ಪ್ರಯುಕ್ತ ಜೇವರ್ಗಿ ತಾಲೂಕಾ ಮಟ್ಟದ ಪಿಯು ಕಾಲೇಜುಗಳ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಇಂದು ಜೇವರ್ಗಿಯ ಕದಂಬ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲುಕಾ ಮಟ್ಟದ ಕ್ವಿಜ್ ಮತ್ತು ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಮತ್ತು ತಾಲೂಕಾ ನೊಡೆಲ್ ಅಧಿಕಾರಿ ಮಹ್ಮದ್ ಅಲ್ಲಾಉದ್ದೀನ್ ಸಾಗರ ಚಾಲನೆ ನೀಡಿದರು.
ಸರ್ಕಾರಿ ಸ್ವತಂತ್ರ ಪಿಯು ಕಾಲೇಜು ಪ್ರಾಚಾರ್ಯರಾದ ಬಸವರಾಜ ಬಿರಾಜಾದಾರ, ಮಲ್ಲಿಕಾರ್ಜುನ ಮಾಳಗಿ, ಸಿದ್ದಲಿಂಗಪ್ಪ, ಶ್ರೀಶೈಲ ಖಣದಾಳ, ಜಗದೀಶ ಉಕನಾಳ, ಅಮೀನಪ್ಪ ಹೊಸಮನಿ, ಎಚ್.ಬಿ.ಪಾಟೀಲ, ಬಸವರಾಜ, ಅಯ್ಯಣ್ಣ, ದೇವಣಗೌಡ , ವೀರೇಶ ಹಾಗೂ ತಾಲೂಕಿನ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.