
ಜೇವರ್ಗಿ: ನ.18:ಸ್ವಾತಂತ್ರ, ಸಮಾನತೆ ಹಾಗೂ ಸಂವಿಧಾನ ಮೌಲ್ಯಗಳನ್ನು ಕಾಪಾಡಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜೇವರ್ಗಿ ಮತ್ತು ಯಡ್ರಾಮಿ ತಾಲೂಕಾ ಸಮಿತಿ ಇದೇ ನ. 26ರಂದು ಬೆಳಿಗ್ಗೆ 11.30 ಗಂಟೆಗೆ ಜೇವರ್ಗಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಸಂವಿಧಾನದ ರಕ್ಷಣೆ ಭಾರತದ ಐಕ್ಯತೆ” ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕ.ಕ.ಪ್ರ.ಅ.ಮಂಡಳಿ ಅಧ್ಯಕ್ಷ ಡಾ. ಅಜಯ ಧರ್ಮಸಿಂಗ್ ಉದ್ಘಾಟಿಸುವರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಸಂವಿಧಾನ ಪೀಠಿಕೆಗೆ ಗೌರವ ಸಮರ್ಪಣೆ ಮಾಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಶ್ರೀಮತಿ ಕೆ. ನೀಲಾ? ಸೊನ್ನ ಎಸ್ ಜಿ ಎಸ್ ವಿ. ಪ. ಪೂ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಡಮನಿ ಆಗಮಿಸುವರು. ಹಿರಿಯರಾದ ಅರ್ಜುನ ಭದ್ರೆ ಪ್ರಾಸ್ತಾವಿಕ ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಕ್ರಾಂತಿ, ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ, ಕಾಶೀಮ ಪಟೇಲ? ಶಿವಶರಣಪ್ಪ ಕೋಬಾಳ? ಶರಣಬಸವ ಕಲ್ಲಾ, ಮಲ್ಲಕಾರ್ಜುನ ಪೂಜಾರಿ?, ಶ್ರೀಮತಿ ಶಿವಕಾಂತಮ್ಮ ದಿ, ಶಾಂತಪ್ಪ ಕಟ್ಟಿಮನಿ, ಎಇಇ ನಾಗಮೂರ್ತಿ ಶೀಲವಂತ? ರಾಜಶೇಖರ ಕಟ್ಟಿಮನಿ? ದಲಿತ ಮುಖಂಡರಾದ ಸುಭಾಷ ಚನ್ನೂರ? ಗುರಣ್ಣ ಕಾಚಾಪುರ, ಹಯ್ಯಾಳಪ್ಪ ಗಂಗಾಕರ್? ಶಾಂತಪ್ಪ ಯಲಗೋಡ, ಪುಂಡಲೀಕ ಗಾಯಕವಾಡ? ಮಲ್ಲಣ್ಣ ಕೊಡಚಿ, ಭೀಮರಾಯ ನಗನೂರ? ದೌವಲಪ್ಪ ಮದನ್? ಸಿದ್ರಾಮ ಕಟ್ಟಿ? ಶ್ರೀಹರಿ ಕರಕಿಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿರುವರು. ಇದೇ ವೇಳೆ ಒಂದೇ ಬಾರಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ದಂಪತಿಗಳಾದ ಡಾ. ಮಹಾಲಿಂಗಪ್ಪ ಬಿ. ಮಂಗಳೂರು? ಡಾ. ಸೌಭಾಗ್ಯ ಎಂ. ಮಂಗಳೂರು ಅವರನ್ನು ಸನ್ಮಾನಿಸಲಾಗುವುದು.
ಬುದ್ಧ, ಬಸವ, ಡಾ.ಅಂಬೇಡ್ಕರ್ ಅನುಯಾಯಿಗಳು ಹಾಗೂ ಬುದ್ದಿ ಜೀವಿಗಳು, ವಿಚಾರವಾದಿಗಳು, ಹೋರಾಟಗಾರರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೋಳಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, (ಕ್ರಾಂತಿಕಾರಿ) ಜೇವರ್ಗಿ ಮತ್ತು ಯಡ್ರಾಮಿ ತಾಲೂಕಾ ಸಮಿತಿ ವತಿಯಿಂದ ಮನವಿ ಮಾಡಲಾಗಿದೆ ಎಂದು ಸಂಘಟಕ ಮಹೇಶ ಕೋಕಿಲೆ ಕೋರಿದ್ದಾರೆ.