ಜೇರಟಗಿ ಸಿ ಆರ್ ಪಿ.ಮುನೀರ ಅಹ್ಮದ್ ಅವರಿಗೆ ರಾಜ್ಯ ಮಟ್ಟದ ಶಿಕ್ಷಣ ಸಾರಥಿ ಪ್ರಶಸ್ತಿ

ಜೇವರ್ಗಿ:ಜು.29:ತಾಲ್ಲೂಕಿನ ಜೇರಟಗಿ ಕ್ಲಸ್ಟರ್ ನ ಮುನೀರ ಅಹ್ಮದ್ ಸಿ ಆರ್ ಪಿ ರವರಿಗೆ ಶಿಕ್ಷಣ ಸಾರಥಿ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ) ಮೈಸೂರು ವತಿಯಿಂದ ನೀಡಿ ಗೌರವಿಸಿದ್ದಾರೆ.
ತುಮಕೂರು ಜಿಲ್ಲಾ ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಸಿದ್ದಗಂಗಾ ಮಠದ ಉದ್ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದು ರಾಜ್ಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿ.ಆರ್.ಪಿ.ಮುನೀರ ಅಹ್ಮದರವರಿಗೆ ಶಿಕ್ಷಣ ಸಾರಥಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಲು ಸಹಕಾರ ನೀಡಿದ ಮಾನ್ಯ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ, ಜೇವರ್ಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಜೇವರ್ಗಿ,ಇಸಿಓ ಅಧಿಕಾರಿಗಳು ಬಿ ಆರ್ ಪಿ ಎಸ್ ಅಧಿಕಾರಿಗಳು,ಸಿ ಆರ್ ಪಿ ಎಸ್ ಸಹೋದ್ಯೋಗಿ ಮಿತ್ರರಿಗೆ, ಸಂಘದ ಪದಾಧಿಕಾರಿಗಳಿಗೆ,ಕ್ಲಸ್ಟರ ನ ಮುಖ್ಯ ಶಿಕ್ಷಕರಿಗೆ ಸಹ ಶಿಕ್ಷಕರಿಗೆ ಮುನೀರ ಅಹ್ಮದ್, ಮಹಾಂತೇಶ್ ಪಾಟೀಲ್ ಅವರು ಹರ್ಷ ವ್ಯೆಕ್ತ ಪಡಿಸಿದ್ದಾರೆ.