ಜೇಗರಕಲ್ ಹುಟ್ಟು ಹಬ್ಬ ಹಣ್ಣು-ಹಂಪಲು ವಿತರಣೆ.

ಸಿರವಾರ.ಜ.೩-ಬಿಜೆಪಿ ಹಿರಿಯ ಮುಖಂಡ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ದಿ. ಪ್ರಕಾಶಪ್ಪ ಜೆಗರಕಲ್ ಅವರ ೬೫ ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು(ಜನವರಿ ೧ ರಂದು) ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ರೆಡ್ಡು, ಹಣ್ಣು ಹಂಪಲುಗಳು ವಿತರಿಸಿದರು.
ಬಿಜೆಪಿ ಮಾನ್ವಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಉಮೇಶ್ ಜೆಗರಕಲ್, ಎಲ್‌ಐಸಿ ನಾಗಪ್ಪ ಮಲ್ಲಿಕಾರ್ಜುನ್ ಜೇಗರಕಲ್, ಎಪಿಎಂಸಿ ನಿರ್ಧೇಶಕ ಮವಲಸಾಬ ಗಣದಿನ್ನಿ, ಕೃಷ್ಣರೆಡ್ಡಿ, ಮಿಥುನ್ ಚಾಗಿ, ಹೆಚ್.ಕೆ. ಕರಿಯಪ್ಪ, ಬಸವನಗೌಡ ತಡಕಲ್, ಬಸವರಾಜ್ ಸಜ್ಜನ್, ತ್ರಿಯಂಬಕೇಶ್ವರ, ಚೇತನ್ ಸಜ್ಜನ್, ಬಸವರಾಜ ನಂದರೆಡ್ಡಿ, ಸುರೇಶ್ ನಾಯಕ್ ಸೇರಿದಂತೆ ಇನ್ನಿತರರು ಇದ್ದರು.