
ಸಿರವಾರ,ಏ.೨೧- ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಆಕಸ್ಮಿಕ ಅಭ್ಯರ್ಥಿಯಾಗಿರುವೆ. ಬಿಜೆಪಿಯ ಎಲ್ಲಾ ಹಿರಿಯ, ಕಿರಿಯ ಮುಖಂಡರು ನನಗೆ ಬೆಂಬಲಿಸಿ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ, ಹಿರಿಯ ಮುಖಂಡರೆಲ್ಲನು ಬೆಟ್ಟಿಯಾಗಿ ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೆಳುತ್ತಿರುವೆ ಎಂದು ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ.ವಿ.ನಾಯಕ ಹೇಳಿದರು.
ಪಟ್ಟಣದ ಬಿಜೆಪಿಯ ಹಿರಿಯ ಮುಖಂಡ ಜೆ.ಶರಣಪ್ಪಗೌಡ ನಿವಾಸಕ್ಕೆ ಗುರುವಾರ ಭೇಟಿಯಾಗಿ ಅವರನ್ನು ಸನ್ಮಾನಿಸಿ ಕ್ಷೇತ್ರದಲ್ಲಿ ಅನೇಕರ ಶ್ರಮದಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಚುನಾವಣೆಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದರು. ಆದರೆ ಪಕ್ಷ ನನಗೆ ಟಿಕೇಟ್ ನೀಡಿದೆ,ಎಲ್ಲಾರ ಆಶಿರ್ವಾದ ಕೇಳುತ್ತಿರುವೆ, ಯಾವುದೇ ಅಸಮದಾನ ಇಟ್ಟುಕೊಳ್ಳದೆ ನನ್ನ ಗೆಲುವಿಗೆ ಸಹಕಾರ ನೀಡಿ, ಬೆಂಬಲಿಸಿ ಆಶಿರ್ವಾದ ಮಾಡುವಂತೆ ಕೊರಿದರು.
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿತು. ಪಕ್ಷದ ನಿಷ್ಠಾವಂತರಿಗೆ ಬೆಲೆ ನೀಡುತ್ತಿರಲ್ಲ, ನನ್ನ ತಂದೆಗೆ ಸಚಿವ ಸ್ಥಾನ ತಪ್ಪಿಸಿದರು. ನನಗೆ ಟಿಕೆಟ್ ನೀಡದಂತೆ ತಡೆದರು. ಆದರಿಂದ ಮನನೊಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದೆ ಎಂದರು. ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ ನಾನು ಸಹ ಬಿಜೆಪಿ ಆಕಾಂಕ್ಷಿಯಾಗಿದ್ದೆ, ಆದರೆ ಪಕ್ಷದ ವರಿಷ್ಠರು ಬಿವಿ ನಾಯಕರಿಗೆ ಟಿಕೆಟ್ ನೀಡಿದೆ, ಪ್ರಮಾಣಿಕವಾಗಿ ಬಿ.ವಿ ನಾಯಕರ ಗೆಲುವುಗೆ ಶ್ರಮಿಸುವೆ, ಯಾವುದೇ ಊಹಾಪೋಹಗಳುಗೆ ಕಿವಿ ಕೊಡುವ ಅವಶ್ಯಕತೆ ಇಲಾ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವೆ ಎಂದರು. ಜೆ.ಶರಣಪ್ಪಗೌಡ, ಜೆ.ದೇವರಾಜಗೌಡ, ಮಲ್ಲೇಶ ನಾಯಕ, ಹನುಮಂತ್ರಾಯ ಅತ್ತನೂರು, ನಾಗನಗೌಡ ಅತ್ತನೂರು, ಉದಯಕುಮಾರ್ ಚಾಗಭಾವಿ,ರಮೇಶ ಚಿಂಚರಕಿ ಸುಭಾಷ್, ಲಕ್ಷ್ಮಣ ಜೆ.ಬಸವರಾಜ ಸೇರಿದಂತೆ ಇನ್ನಿತರು ಇದ್ದರು.