ಜೆ ಮಲ್ಲಪೂರ : ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ದದ್ದಲ್ ಭೇಟಿ

ರಾಯಚೂರು.ಜೂ.೭- ಜೆ ಮಲ್ಲಪೂರ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರವರು ಭೇಟಿ ನೀಡಿ, ಪರಿಶೀಲಿಸಿದರು.
ಈ ಮಹಾಮಾರಿ ಕೊರೋನ್(ಛಿoviಜ ೧೯) ಸಂದರ್ಭದಲ್ಲಿ ಮುಂಚೂಣಿಯಲ್ಲಿ ಜೀವನದ ಹಂಗು ತೊರೆದು ಮನೆಗೆ ಹೋಗಿ ಜನರ ಸೇವೆ ಸಲ್ಲಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ವೈದ್ಯಾಧಿಕಾರಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಮಾಸ್ಕ್ ಸ್ಯಾನಿಟೈಸರ್, ತರಕಾರಿ ಮತ್ತು ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಣಾ ಮಾಡಿದರು.
ಶಾಸಕರು ಸ್ವತಃ ಖರ್ಚಿನಲ್ಲಿ ಪ್ರತಿನಿತ್ಯ ರಾಯಚೂರು ಗ್ರಾಮೀಣ ಕ್ಷೇತ್ರ ೧೧ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಗಳಲ್ಲಿ ನಡೆಯುವ ಮಧ್ಯಾಹ್ನ ಊಟ ವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ವೈದ್ಯಾಧಿಕಾರಿ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಆಸ್ಪತ್ರೆಗೆ ಬಂದಿರುವ ಗರ್ಭಿಣಿಯರಿಗೆ ಮತ್ತು ರೋಗಿಗಳಿಗೆ ಊಟ ನೀಡಿದರು.
ನಂತರ ಮಾತನಾಡಿದವರು, ಯಾರೂ ಕೂಡ ಕೊರೊನ್ ಬಗ್ಗೆ ಭಯ ಮತ್ತು ಆಂತಕ ಬೇಡ ಎಚ್ಚರವಿರಲ್ಲಿ ಎಲ್ಲರೂ ಕೂಡ ಮಾಸ್ಕ ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಕಾಪಾಡಕೊಳ್ಳಲು ತಿಳಿಸಿದರು. ಕೆಮ್ಮು ನೆಗಡಿ ಜ್ವರ ಬಂದಾಗ ತಕ್ಷಣವೇ ನಿರ್ಲಕ್ಷ್ಯ ಮಾಡದೇ ವೈದ್ಯರಲ್ಲಿ ತೋರಿಸಿಕೊಳುವುದು ಸಲಹೆ ಪಡೆಯುವುದು ಒಳ್ಳೆಯದು ಎಂದರು. ೪೫ ವಯಸ್ಸು ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಹಾಕಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಶಾಕೀರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮತ್ತು ಮುಖಂಡರಾದ ದೇವಸೂಗೂರು ಬ್ಲಾಕ್ ಅಧ್ಯಕ್ಷರಾದ ನರಸನಗೌಡ, ಜಯಂತಿರಾವ್ ಪತಂಗಿ,ಶ್ರೀನಿವಾಸ್,ಸಿದ್ದನಗೌಡ , ಗಡಬಸಯ್ಯ ತಾತ ,ಬಸವರಾಜ ವಕೀಲ್ ,ಮಹಾಲಿಂಗಪ್ಪ,ಶಶಿಕಲಾ ಭೀಮರಾಯ ,ಅಶೋಕ್,ಅಜ್ಮೀರ್ ಸಾಬ್,ಶರಣಬಸವ ,ಶರಣಬಸವ ಹೆಂಬೆರಾಳ, ಚಂದ್ರಶೇಖರ್ ,ಬಶೀರ್ ಸಾಬ್,ಸಾಧಿಕ್,ಆಂಜನೇಯ ಅರಷಿಣಿಗಿ, ವೆಂಕಟೇಶ್ ಮನ್ಸಲಾಪುರ ,ಆಂಜನೇಯ ಕೊಂಬಿನ್,ಬಸವರಾಜ್ ಮುನ್ಸಲಾಪುರ್ ಮಹಾದೇವ ಮರ್ಚೆಡ, ವೆಂಕಟೇಶ್ ಕುಕನೂರ್, ದೇವಪ್ಪ,ತಿಪ್ಪಣ್ಣ ,ಶಿವರಾಜ್ , ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದರು.