ಜೆ.ಪಿ.ಶಾಲೆ ಮಕ್ಕಳ ಶಿಸ್ತು ಪಾಲನೆಗೆ ಡಾ.ಭದ್ರಶೆಟ್ಟಿ ಪ್ರಶಂಸೆ

ಕಲಬುರಗಿ,ಮಾ.6-ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಜೆ.ಪಿ.ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳ ಶಿಸ್ತು ಪಾಲನೆಗೆ ರಾಷ್ಟ್ರೀ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಚರಣೆ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಭದ್ರಶೆಟ್ಟಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಶಾಲೆಯ 41ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಮಕ್ಕಳ ಶಿಸ್ತು, ಶಿಕ್ಷಕರ ಅವಿನಾಭಾವ ಸಂಬಂಧ ನೋಡಿ ಇದೊಂದು ಆದರ್ಶ ಶಾಲೆ, ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶ ಮತ್ತು ಇಸ್ರೋದಲ್ಲಿ ಸಹಾಯಕ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ಈ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಕೌಶಲ್ಯದೊಂದಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮರುಳಸಿದ್ಧ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿ ಈ ಶಾಲೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಶಾಲೆಯ ಸಂಸ್ಥಾಪಕರಾದ ಶಾಮರಾವ ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯರಾದ ಸೋಮಶೇಖರ ಒಡೆಯರ್, ಪ್ರಭುರಾಯ ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಸುಭಾಷ ಪೊಲೀಸ್ ಪಾಟೀಲ, ಶಾಮರಾವ ಪಾಟೀಲ, ಮುಖ್ಯ ಗುರುಗಳಾದ ಕಿರಣಕುಮಾರ ಮಂಟಗಿ, ಆರತಿ ಬೆಳಮಗಿ, ಕಾರ್ಯದರ್ಶಿ ಸುಮಾ ಪ್ಯಾಟಿ, ಶಿಕ್ಷಕರು, ಗಣ್ಯರು, ವಿದ್ಯಾರ್ಥಿಗಳು, ಪಾಲಕರು ಇದ್ದರು.
ಸರಕಾರಿ ನೌಕರಿಗೆ ಸೇರಿದ ಸೌಂದರ್ಯ ಧುತ್ತರಗಿ, ಪ್ರಭಾಕರ ಖೋಂಬಿನ್, ರಿಶಿಕಾಂತ ಪಾಂಡ್ರೆ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕು.ಮನುಜಾ ಹೊನಗುಂಡಿ, ಕು.ರಾಧಿಕಾ ಗುತ್ತೇದಾರ, ಕು.ಮಾಯಾವತಿ ಖೋಂಬಿನ್ ಅವರಿಗೆ ನಗದು ಬಹುಮಾನ ವಿತರಿಸಲಾಯಿತು. ಶಾಲೆಯ ಆದರ್ಶ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಶರಣಬಸಪ್ಪ ಉಪ್ಪಿನ ನಿರೂಪಿಸಿದರು. ರಾಜಶೇಖರ ಬಿರಾದಾರ ವಂದಿಸಿದರು.