ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ಕೆ.ಅರ್.ಪಿ.ಪಿ.ಗೆ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 17: ಜೆ.ಡಿ.ಎಸ್. ಪಕ್ಷಕ್ಕೆ ಕಮತೂರು ಮಲ್ಲೇಶಪ್ಪ, ಕೆ.ಕೆ.ಮೆಹಬೂಬ್ ಭಾಷಾ, ಎಂ.ಡಿ. ಯೂಸೂಫ್, ಕೆ.ಕುಮಾರಸ್ವಾಮಿ, ಅಂಜಿನಪ್ಪ, ಕಾಸಿಂಪೀರಾ, ಯಶವಂತನಗರ, ಷಫಿ, ಹೊನ್ನೂರಸ್ವಾಮಿ. ಷರೀಫ್, ಹಾಲ್‍ಸ್ವಾಮಿಯವರು ರಾಜೀನಾಮೆ ನೀಡಿ ಜನಾರ್ಧನ ರಡ್ಡಿಯವರ ಕೆ.ಅರ್.ಪಿ.ಪಿ. ಪಕ್ಷಕ್ಕೆ ಕೆ.ಅರ್.ಪಿ.ಪಿ. ಪಕ್ಷದ ಮುಖಂಡ ಕೆ.ಎಸ್. ದಿವಾಕರ್ ಹಾಗೂ ತಾಲೂಕು ಅಧ್ಯಕ್ಷ ಪಿ.ವಿ. ಶ್ರೀನಿವಾಸ ನೇತೃತ್ವದಲ್ಲಿ ಸೇರ್ಪಡೆಯಾದರು. ಈಗಾಗಲೇ ಖಾದರ್ ಭಾಷಾರವರು ಅವರ ಸಹೋದ್ಯೋಗಿಗಳೊಂದಿಗೆ ಜೆ.ಡಿ.ಎಸ್. ಪಕ್ಷ ತೊರೆದು ಕೆ.ಅರ್.ಪಿ. ಪಕ್ಷಕ್ಕೆ ಸೇರ್ಪಡೆಯಾಗಿರುವುದು ವಿಶೇಷ.