ಜೆ.ಡಿ.ಎಸ್.ನಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ, ಪ್ರತಿಭಟನೆ

ಕೋಲಾರ,ಸೆ,೧೨- ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ತಿಂಗಳಲ್ಲಿಯೇ ವಿದ್ಯುತ್ ಪೂರೈಕೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಜನಜೀವನ ಅಸ್ಥವ್ಯಸ್ತ ಮಾಡಿದೆ, ಚುನಾವಣೆಗೆ ಮುನ್ನ ೭ ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದು ಅದನ್ನು ಈಡೇರಿಸುವಲ್ಲಿ ವಿಫಲವಾಗಿಯೂ ನುಡಿದಂತೆ ನಡೆದ್ದೇವೆ ಎಂದು ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದು ಜೆ.ಡಿ.ಎಸ್. ಮುಖಂಡ ಸಿ.ಎಂ.ಆರ್ ಶ್ರೀನಿನಾಥ್ ಟೀಕಿಸಿದರು,
ಜೆ.ಡಿ.ಎಸ್. ಪಕ್ಷದ ವತಿಯಿಂದ ನಗರದ ಬೆಸ್ಕಾಂ ಕಾರ್ಯಪಾಲಕ ಅಭಯಂತರರ ಕಚೇರಿಗೆ ಮುತ್ತಿಗೆ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸಾಮಾನ್ಯ ಜನರ ಬಡತನವನ್ನೆ ಬಂಡವಾಳವನ್ನಾಗಿಸಿ ಕೊಂಡು ಬಿಟ್ಟಿ ಭಾಗ್ಯಗಳ ಭರವಸೆಗಳ ಅಮಿಷವುಡ್ಡಿರುವ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಸಾರ್ವಜನಿಕರ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು,
ಸಾರ್ವಜನಿಕರ ಮೂಲ ಭೂತ ಸೌಲಭ್ಯಗಳಲ್ಲಿ ಒಂದಾದ ವಿದ್ಯುತ್ ಪೂರೈಕೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಭರದಲ್ಲಿ ಗ್ರಾಮೀಣಾ ಭಾಗದಲ್ಲಿ ಸಮರ್ಪಕವಾದ ವಿದ್ಯುತ್ ಪೂರೈಕೆ ಇಲ್ಲದೆ ರೈತರ ಶೈಕ್ಷಣಿಕ ಅಭ್ಯಾಸಕ್ಕೂ ತೊಂದರೆ ಉಂಟಾಗುತ್ತಿದೆ. ನಿರಂತರ ವಿದ್ಯುತ್ ಪೂರೈಕೆಯ ಭರವಸೆ ನೀಡಿ ಮಾತು ತಪ್ಪಿದ ಸರ್ಕಾರ ಎನಿಸಿ ಕೊಂಡಿದೆ. ಕೃಷಿಗೆ, ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಇಲ್ಲದೆ ರೈತರ ಬೆಳೆಗಳಿಗೆ ನೀರು ಪೂರೈಸಲಾಗದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಇಲ್ಲದೆ ಬಂಡಾವಳಷಾಹಿಗಳು ಬೇರೆ ರಾಜ್ಯಗಳಿಗೆ ಪಾಲಾಯನ ಮಾಡಲು ಚಿಂತಿಸುತ್ತಿದ್ದಾರೆ. ಇದರಿಂದ ನಿರುದ್ಯೋಗಗಳಿಗೆ ಅವಕಾಶ ಮಾಡಿ ಕೊಟ್ಟಾಂತಗುವುದು ಅರ್ಥಿಕ ವ್ಯವಸ್ಥೆಗಳು ಬಿಕ್ಕಟ್ಟಿಗೆ ಸಿಲುಕಲಿದೆ ಎಂದು ಕಳವಳ ವ್ಯಕ್ತ ಪಡೆಸಿದರು.
ಆಡಳಿತರೊಢ ಸರ್ಕಾರವು ಕೊಟ್ಟ ಮಾತಿನಂತೆ ೭ ಗಂಟೆಯ ವಿದ್ಯುತ್ ಪೂರೈಕೆ ಮಾಡಿ ಸಾರ್ವಜನಿಕರು ಶಾಂತಿ ನೆಮ್ಮದಿ ಗೌರವದಿಂದ ಬಾಳಲು ಅವಕಾಶ ಕಲ್ಪಿಸ ಬೇಕು, ಶ್ರಮಿಕ ವರ್ಗದ ರೈತರಿಗೆ ದುಡಿಯಲು ಅವಕಾಶ ಕಲ್ಪಿಸಿ ಕೊಡಬೇಕು., ರೈತರನ್ನು ವಂಚಿಸದೆ ಕೊಟ್ಟ ಮಾತಿನಂತೆ ರೈತರ ಬಗ್ಗೆ ಕಾಳಜಿ ತೋರುವಂತಾಗ ಬೇಕು. ನಿಮ್ಮಗಳ ಜವಾಬ್ದಾರಿ ಮತ್ತು ಕರ್ತವ್ಯ ಪಾಲನೆ ಮಾಡುವ ಮೂಲಕ ಸ್ವಾಭಿಮಾನದ ಬಾಳ್ವೆಗೆ ಅವಕಾಶ ನೀಡುವಂತಾಗ ಬೇಕು, ರೈತರನ್ನು ನಿರ್ಲಕ್ಷಿಸುವುದು ಮುಂದುವರೆಸಿದಲ್ಲಿ ತಕ್ಕ ಪಾಠ ಕಲಿಸ ಬೇಕಾಗುತ್ತದೆ. ರೈತರ ವಿದ್ಯುತ್ ಬೇಡಿಕೆಯನ್ನು ಕೊಡಲೇ ಈಡೀರಿಸದಿದ್ದರೆ ಉಗ್ರ ಪ್ರತಿಭಟನೆಯನ್ನು ಎದುರಿಸ ಬೇಕಾಗುತ್ತದೆ ಎಂದರು,
ಸಾರ್ವಜನಿಕ ವಲಯದಲ್ಲಿ ಶಿಕ್ಷಣ, ಅರೋಗ್ಯ, ಕೃಷಿಗೆ ಹೆಚ್ಚಿನ ಅದ್ಯತೆ ನೀಡುವಂತಾಗ ಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಡಾ.ಬಾಬು ಮೌನಿ ಮಾತನಾಡಿದರು,
ಇದೇ ಸಂದರ್ಭದಲ್ಲಿ ರೈತ ಸಂಘದ ಕೋಟೇರಿ ನಾಗರಾಜ್ ಬೆಸ್ಕಾಂ ಅಧೀಕ್ಷರರಿಗೆ ವಿದ್ಯುತ್ ಬೇಡಿಕೆಯ ಮನವಿ ಪತ್ರವನ್ನು ವಾಚಿಸಿ ನೀಡಿದರು,
ಮನವಿ ಪತ್ರ ಸ್ವೀಕರಿಸಿದ ಸೂಪರ್‌ಡೆಂಟೆಂಡ್ ಇಂಜನಿಯರ್ ಅವರು ಲೋಡ್ ಶೆಡ್ಡಿಂಗ್ ಇಲ್ಲದೆ ೭ ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕಳೆದ ಒಂದು ತಿಂಗಳಿಂದ ವಿದ್ಯುತ್ ಪೂರೈಕೆ ವ್ಯತ್ಯಾಸವಾಗುತ್ತಿರುವುದು, ಬೆಳಿಗ್ಗೆ ೪ ಗಂಟೆ, ರಾತ್ರಿ ೩ ಗಂಟೆ ವಿದ್ಯುತ್ ಪೈರೈಕೆ ಮಾಡಲಾಗುತ್ತಿದೆ. ಇದರೊಂದಿಗೆ ಸಕಾಲದಲ್ಲಿ ಮಳೆಯಾಗದೆ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಸಮಸ್ಯೆಯಲ್ಲಿನ ಲೋಪ ದೋಷಗಳನ್ನು ಸರಿಪಡೆಸಿ ಗುಣಮಟ್ಟದ ನಿರಂತ ಪೂರೈಕೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು,
ಪ್ರತಿಭಟನೆಯಲ್ಲಿ ಜೆ.ಡಿ.ಎಸ್. ಮುಖಂಡರಾದ ವಕ್ಕಲೇರಿ ರಾಮು, ಗೋಪಾಲ್, ರೈತ ಸಂಘದ ಕಂಗಾನ ಹಳ್ಳಿ ನಾರಾಯಣಸ್ವಾಮಿ, ಗಣೇಶ್, ಅಮರೇಶ್. ಸುಜಾತ, ವರಲಕ್ಷ್ಮಿ, ಚಿಕ್ಕ ಕೃಷ್ಣಪ್ಪ, ಶ್ರೀನಿವಾಸಗೌಡ, ಅಬ್ಬಣಿ ಅಪ್ಪಣ, ಐತಾಂಡಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು,