ಜೆ.ಡಿ.ಎಸ್.ಗೆ ದಲಿತ ಸಂಘಟನೆಗಳ ಒಕ್ಕೂಟ ಬೆಂಬಲ

ಕೋಲಾರ, ಮಾ. ೨- ಪ್ರಸ್ತುತ ಬರಲಿರುವ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ದಲಿತ ಸಂಘಟನೆಗಳು ಒಗ್ಗೂಡಿ ನೂತನವಾಗಿ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟವನ್ನು ರಚಿಸಿ ಕೊಂಡುದ್ದು, ಎಲ್ಲಾ ಮುಖಂಡರು ೪ ಭಾರಿ ಸಭೆ ಸೇರಿ ದಲಿತರ ಭವಿಷ್ಯದ ಕುರಿತು ಸಾಧಕ,ಭಾಧಕಗಳನ್ನು ಪರಮಾರ್ಷಿಸಿ ಅಂತಿಮವಾಗಿ ಜನಪರ ಕಾಳಜಿ ಇರುವ ಸ್ಥಳೀಯ ಯುವ ಪ್ರತಿಭೆ ಸಿ.ಎಂ.ಆರ್. ಶ್ರೀನಾಥ್ ಅವರು ಸ್ವಧಿಸಿರುವ ಪ್ರದೇಶಿಕ ಪಕ್ಷವಾದ ಜೆ.ಡಿ.ಎಸ್.ಪಕ್ಷವನ್ನು ಬೆಂಬಲಿಸಲು ಒಕ್ಕೂರಲ ತೀರ್ಮಾನ ಕೈಗೊಂಡಿರುವುದಾಗಿ ಸಂಘಟನೆಯ ಸಂಚಾಲ ಹೂವಳ್ಳಿ ಪ್ರಕಾಶ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಅವಿಭಜಿತ ಕೋಲಾರ ಜಿಲ್ಲೆಯು ಸಮಸಮಾಜಕ್ಕಾಗಿ ಹೋರಾಟದ ಇತಿಹಾಸವಿರುವ ದಲಿತ ಸಂಘಟನೆಗಳ ಹೋರಾಟದ ತವರು ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಪಡೆದು ೭೫ ವರ್ಷಗಳೇ ಕಳೆದರೂ ಸಹ ದಲಿತರ ಮೇಲೆ ದೌರ್ಜನ್ಯಗಳು, ಅಸ್ಪಶ್ಯತೆಗಳು ಇನ್ನು ಜೀವಂತವಾಗಿದೆ ಎಂಬುವುದಕ್ಕೆ ಇತ್ತೀಚೆಗೆ ನಡೆದಿರುವ ಅನೇಕ ಘಟನೆಗಳು ನಿದರ್ಶನವಾಗಿದೆ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವ ದೆಸೆಯಲ್ಲಿ ವಿವಿಧ ಸಂಘಟನೆಗಳು ಒಗ್ಗೂಡಿ ನೊಂದ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ದೊರಕಿಸ ಬೇಕಾಗಿದೆ ಎಂದ ಅವರು ಮಾ ೧೫ರೊಳಗೆ ಜಿಲ್ಲಾ ಮಟ್ಟದ ದಲಿತ ಸಂಘಟನೆಗಳ ಮಹಾ ಸಮಾವೇಶವನ್ನು ಆಯೋಜಿಸಲು ಚಿಂತಿಸಿದೆ ಎಂದರು
ಓಟ್ ಬ್ಯಾಂಕ್‌ಗಾಗಿ ವಿವಿಧ ಸಮುದಾಯಗಳನ್ನು ಒಲೈಸಿ ಕೊಳ್ಳುವ ನಿಟ್ಟಿನಲ್ಲಿ ಆದರ್ಶ ಪುರುಷರನ್ನು ಮುಂದಿಟ್ಟು ಕೊಂಡು ಜಯಂತಿಗಳನ್ನು, ಜಾತಿಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮ,ಮಂಡಳಿಗಳನ್ನು ರಚಿಸಿ ಕೊಂಡು ಸಮ ಸಮಾಜವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿದೆ ಎಂದು ಅಕೋಶ ವ್ಯಕ್ತ ಪಡೆಸಿದ ಅವರು ಜಾತಿ ಧರ್ಮಗಳ ಹೆಸರಿನಲ್ಲಿ ಒಡೆದು ಆಳುವ ಕೆಲಸಗಳಿಗೆ ಕಡಿವಾಣ ಹಾಕ ಬೇಕಾಗಿದೆ. ನೊಂದವರೆಲ್ಲರೂ ಒಂದೇ ಭಾವನೆಯಲ್ಲಿ ಯೋಜನೆಗಳನ್ನು ರೂಪಿಸಿ ಕೊಡಿ ಬಾಳುವ ಕೆಲಸವನ್ನು ಮಾಡುವ ದೆಸೆಯಲ್ಲಿ ಪ್ರಜ್ಞವಂತ ದಲಿತ ಸಂಘಟನೆಗಳ ಒಕ್ಕೂಟವನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ಜಾರಿ ಮಾಡಿದ್ದ ಅನೇಕ ಶಾಶ್ವತ ಯೋಜನೆಗಳೇ ಇಂದಿಗೂ ಮುಂದುವರೆಯುತ್ತಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಮೇಲ್ ಸೇತುವೆಗಳು ಲೋಕ ಕಲ್ಯಾಣಕ್ಕಾಗಿ ಅರ್ಪಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು,
ಕಳೆದ ೨೦೦೮ರಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯ ಮಂತ್ರಿಗಳಾಗಿ ದಲಿತರ .ರೈತರ ಸೇರಿದಂತೆ ಜನಪರ ಅಭಿವೃದ್ದಿ ಯೋಜನೆಗಳಾದ ಐರಾವತ ಯೋಜನೆ, ಲಾಟರಿ ನಿಷೇಧ, ಸಾರಾಯಿ ನಿಷೇಧ, ಭಾಗ್ಯ ಲಕ್ಷ್ಮಿ ಬಾಂಡ್, ವಿಧ್ಯಾರ್ಥಿಗಳಿ ಸೈಕಲ್ ಭಾಗ್ಯ, ಯರ್‌ಗೋಳ್, ಎತ್ತಿನಹೊಳೆ ಯೋಜನೆಗಳು, ವಸತಿ ಸೌಲಭ್ಯ, ರೈತರಿಗೆ ೨೪ ಸಾವಿರ ಕೋಟಿ ರೂ ಸಾಲ ಮನ್ನ, ಗ್ರಾಮವಾಸ್ತವ್ಯ, ಜನತಾದರ್ಶನ ಮುಂತಾದ ಜನಪರ ಯೋಜನೆಗಳು ಐತಿಹಾಸಿಕ ದಾಖಲೆಗಳಾಗಿದೆ ಎಂದು ಶ್ಲಾಘಿಸಿದರು,
ಜೆ.ಡಿ.ಎಸ್. ಪಕ್ಷವು ಮುಂಬರಲಿರುವ ಚುನಾವಣೆಯಲ್ಲಿ ೧೨೩ ಸ್ಥಾನಗಳ ಗುರಿ ಹೊಂದಿದೆ. ಪಂಚರತ್ನ ಜನಪರ ಯೋಜನೆಯ ಭರವಸೆಯನ್ನು ನೀಡಿದೆ. ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ರೈತ ಚೆತನ್ಯ, ವಸತಿ ಹಾಗೂ ಯುವಜನ ಮತ್ತು ಮಹಿಳಾ ಸಬಲೀಕರಣ ಯೋಜನೆಗಳನ್ನು ಅಧಿಕಾರಕ್ಕೆ ಬಂದ ೨೪ ಗಂಟೆಯ ಅವಧಿಯೊಳಗೆ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದಾರೆ ಎಂದರು.
ಮುಂಬರಲಿರುವ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದಿಂದ ಸ್ವರ್ಧಿಸಲಿರುವ ಸಿ.ಎಂ.ಆರ್ ಶ್ರೀನಾಥ್ ಅವರನ್ನು ಬೆಂಬಲಿಸುವ ಮೂಲಕ ಮುಂದಿನ ಮುಖ್ಯ ಮಂತ್ರಿ ಕುಮಾರಣ್ಣ ಅವರ ಕೈ ಬಲಪಡೆಸಲು ಪ್ರಜ್ಞಾವಂತ ದಲಿತ ಸಂಘಟನೆಗಲ ಒಕ್ಕೂಟವು ನಿರ್ಧಾರ ಕೈಗೊಂಡಿದೆ ಎಂದ ಅವರು ಶ್ರೀನಾಥ್ ಅವರು ಸ್ಥಳೀಯ ಯುವ ಮಾಸ್ಟರ್ ಡಿಗ್ರಿ ಪಡೆದಿರುವ ವಿಧ್ಯಾವಂತ, ಬುದ್ದಿವಂತ ಎಲ್ಲಕ್ಕೂ ಮಿಗಿಲಾಗಿ ಮಾನವೀಯತೆ ಹೃದಯವಂತ ರೈತ ಉದ್ಯಮಿಯಾಗಿದ್ದು ಮಾರುಕಟ್ಟೆಯಲ್ಲಿ ರೈತರಿಗಾಗಿ ಸಾಮಾಜಿಕ ನ್ಯಾಯಾ ದೊರಕಿಸುತ್ತಿರುವ ಬಡವರಿಗೆ ಸ್ಪಂದಿಸುವಂತ ದೇವತಾ ಮನುಷ್ಯರಾಗಿದ್ದಾರೆ.ಕೊರೋನಾ ಸಂದರ್ಭದಲ್ಲಿ ಕಡುಬಡವರಿಗೆ ಸಹಾಯ ಹಸ್ತ ಚಾಚಿದ ಏಕೈಕ ವ್ಯಕ್ತಿ ದಿನಸಿ ಕಿಟ್, ವಸ್ತ್ರದಾನ, ವಸತಿ ಸೌಲಭ್ಯಕ್ಕೆ ಅನುವು ಮಾಡಿಕೊಡುತ್ತಿರುವ ಕೊಡುಗೈದಾನಿಯಾಗಿರುವರಿಗೆ ಅಧಿಕಾರ ನೀಡಿದರೆ ಮಾತ್ರ ಕೋಲಾರ ಅಭಿವೃದ್ದಿ ಕಾಣಲು ಸಾಧ್ಯ. ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರಗಳಲ್ಲೂ ಜೆ.ಡಿ.ಎಸ್. ಅಭ್ಯರ್ಥಿಗಳು ಆಯ್ಕೆಯಾಗುವಂತೆ ನಾವು ಬೆಂಬಲಿಸುತ್ತಿದ್ದೇವೆ.ನೀವು ಬೆಂಬಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು,
ಪ್ರಶ್ನೆಯೊಂದಕ್ಕೆ ಕಾಂಗ್ರೇಸ್ ಮತ್ತು ಬಿಜೆಪಿ ಸರ್ಕಾರದ ಆಡಳಿತವನ್ನು ವೈಖರಿಗಳನ್ನು ಖಂಡಿಸಿದ ಅವರು ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆಗಳು, ಕಮೀಷನ್ ಹಗರಣಗಳು, ಬಂಡವಾಳಷಾಹಿಗಳ ಸಾಲ ಮನ್ನ, ಭ್ರಷ್ಟಚಾರದ ಆಡಳಿತದ ಅವ್ಯವಸ್ಥೆಗಳನ್ನು ಕಟುವಾಗಿ ಟೀಕಿಸಿದರು,
ಪತ್ರಿಕಾಗೋಷ್ಠಿಯಲ್ಲಿ ದಲಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಾಲಗೋವಿಂದ, ಕೋನಲ್ಲ, ವೇಣುಗೋಪಾಲ್ ತಾರಕ ಮಂಜು, ಶಿವಣ್ಣ, ಅಂಜನಪ್ಪ, ಡಿ.ಆನಂದ ಮೂರ್ತಿ,ಚೌಡಪ್ಪ, ಚೇತನ್ ಬಾಬು,ಮುನಿಯಪ್ಪ ಮುಂತಾದವರು ಹಾಜರಿದ್ದರು.