ಜೆ.ಎನ್.ಎನ್.ಸಿ: ಐ.ಓ.ಟಿ ಕುರಿತು ಐದು ದಿನಗಳ ಕಾರ್ಯಾಗಾರ

ಶಿವಮೊಗ್ಗ:.ಜ.೧; ನಗರದ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತ ಸರ್ಕಾರದ ಅಟಲ್ ಅಕಾಡೆಮಿ ಹಾಗೂ ಕಾಲೇಜಿನ ಎಲೆಕ್ಟಾçನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ಆನ್ಲೆöÊನ್ ಮೂಲಕ ಜ.04 ರಿಂದ 08 ರವರೆಗೆ ಐದು ದಿನಗಳ ಕಾಲ ಐ.ಓ.ಟಿ ತಂತ್ರಜ್ಞಾನದ ಮೂಲಕ ಸ್ಮಾರ್ಟ್ ವಿಷಯಗಳನ್ನು ರೂಪಿಸುವುದರ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿದೆ.ಜ.04 ರಂದು ಬೆಳಿಗ್ಗೆ 9:30 ಕ್ಕೆ ಕಾಲೇಜಿನ ಆಡಳಿತ ಕಟ್ಟಡದ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದ್ದು ರಾಷ್ಟಿçÃಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜೆ.ಎನ್.ಎನ್.ಸಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಶಿಧರ.ಕೆ.ಕುದರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಇನ್‌ಫ್ರಾಸ್ಟçಕ್ಚರ್ ಡೀನ್ ಡಾ.ಎಂ.ಎA.ರಜತ್ ಹೆಗಡೆ, ಎಲೆಕ್ಟಾçನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ, ಕಾರ್ಯಾಗಾರದ ಸಂಯೋಜಕರಾದ ಡಾ.ಎಸ್.ಪ್ರಮೋದ್ ಕುಮಾರ, ಬೆನಕ್ ಪಟೇಲ್.ಎಂ.ಪಿ, ದರ್ಶನ.ಕೆ.ವಿ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.ಸಂಪನ್ಮೂಲ ವ್ಯಕ್ತಿಗಳಾಗಿ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಹ ಪ್ರಾದ್ಯಾಪಕರಾದ ಪ್ರಶಾಂತ್.ಜಿ.ಎಸ್, ಬೆನಕ್ ಪಟೇಲ್, ಡಾ.ಚೇತನ್.ಕೆ.ಆರ್, ದಾವಣಗೆರೆ ಜಿ.ಎಂ.ಐ.ಟಿ ಕಾಲೇಜಿನ ರವಿತೇಜ ಬಾಲೆಕಾಯ್, ಏಕತ್ವ ಇನೊವೇಷನ್ ಸಹ ಸಂಸ್ಥಾಕಪರಾದ ಕೌಶಿಕ್ ಆರ್ ಉಡುಪ, ಹಾಸನ ಎಂ.ಐ.ಸಿಯ ಡಾ.ಆನಂದ ಬಾಬು, ಖ್ಯಾತ ಮನೋ ವೈದ್ಯರಾದ ಡಾ.ಅರವಿಂದ್.ಎಸ್.ಟಿ, ಎನ್.ಐ.ಟಿ.ಕೆ ಸೂರತ್ಕಲ್‌ನ ಡಾ.ಕಿರಣ್.ಎಂ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.ದೇಶದ ವಿವಿಧ ಕಾಲೇಜುಗಳ ಸುಮಾರು 200 ಕ್ಕು ಹೆಚ್ಚು ಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಶಶಿಧರ.ಕೆ.ಕುದರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.