ಜೆ.ಎಂ. ಶಿವಪ್ರಸಾದ್ ಕರ್ನಾಟಕ ರಾಜ್ಯ ಸಹಕಾರ ಮಂಡಳಿಗೆ ಆಯ್ಕೆ

ಸಂಡೂರು :ಏ:2 ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷರಾದ ಜೆ.ಎಂ. ಶಿವಪ್ರಸಾದ್ ರವರು ಕರ್ನಾಟಕ ರಾಜ್ಯ ಸಹಕಾರ ಮಂಡಳಕ್ಕೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆದ ಮಹಾಮಂಡಲದ ಚುನಾವಣೆಯಲ್ಲಿ ಕಲಬುರ್ಗಿ ವಿಭಾಗದಿಂದ ಮೊದಲ ಬಾರಿಗೆ ಸ್ಪರ್ದಿಸಿದ್ದು, ರಾಜ್ಯ ಸಹಕಾರ ಮಹಾ ಮಂಡಲಕ್ಕೆ ಬಳ್ಳಾರಿ ಜಿಲ್ಲೆಯಿಂದ ಇದೇ ಮೊದಲ ಬಾರಿಗೆ ಪ್ರಾತಿನಿತ್ಯ ದೊರೆತತಂತಾಗಿದೆ. 1965ರಿಂದ ದಿ|| ಎಂ. ವೈ ಘೊರ್ಪಡೆಯವರು ಜೆ.ಎಂ. ವೃಷಬೇಂದ್ರಯ್ಯಸ್ವಾಮಿಗಳು ಹಾಗೂ ಹಲವಾರು ಮುಖಂಡರುಗಳು ಸತತವಾಗಿ ಪ್ರಯತ್ನಿಸಿದರು ಸಹಾ ಆಯಕ್ಕೆ ಸಿಕ್ಕಿರಲಿಲ್ಲ. ಯೋಗಾ ಯೋಗವೇ ಎನ್ನುವಂತೆ ಜೆ.ಎಂ. ಶಿವಪ್ರಸಾದ್ ಅವರಿಗೆ ಕರ್ನಾಟಕ ರಾಜ್ಯ ಸಹಾಕರ ಮಂಡಳ ಆಯ್ಕೆ ಅದೃಷ್ಟ ಕುಲಾಯಿಸಿದೆ ಎಂದು ಭಾವಿಸಬೇಕಾಗಿದೆ. ಇದಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸರ್ವ ಸಂಘದ ಸದಸ್ಯರು ಜೆ.ಎಂ. ಶಿವಪ್ರಸಾದ್ ರವರ ಆಯ್ಕೆಯನ್ನ ಸ್ವಾಗತಿಸಿದ್ದಾರೆ.