ಜೆ.ಇ ಲಸಿಕಾ ಅಭಿಯಾನ ಯಶಸ್ವಿಗೆ ಕರೆ

ಗದಗ,ನ.24: ಡಿಸೆಂಬರ್ 5 ರಿಂದ 24 ರವರೆಗೆ ಜರುಗುವ ಜೆಇ ಲಸಿಕಾ ಅಭಿಯಾನವನ್ನು ತಾಲೂಕಿನ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮುಂಡರಗಿ ತಹಶೀಲ್ದಾರ ಶ್ರೀಮತಿ ಶು?ತಿ ಮಲ್ಲಪ್ಪಗೌಡ್ರ ತಿಳಿಸಿದರು.

ಮುಂಡರಗಿ ತಾಲೂಕಾ ದಂಢಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ತಾಲೂಕಾ ಮಟ್ಟದ ಟಾಸ್ಕ್‍ಪೆÇೀರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ 1 ವರ್ಷದಿಂದ 6 ವರ್ಷದ ಗುರುತಿಸಿ, ಎಲ್ಲಾ ಮಕ್ಕಳಿಗೆ ಜೆ.ಇ ಲಸಿಕಾಕರಣದ ಕುರಿತು ಕ್ರಮ ಜರುಗಿಸಬೇಕು. ಎಲ್ಲಾ ವಸತಿ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಜೆ.ಇ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು ಪಂಚಾಯಿತಿಯ ಎಲ್ಲಾ ಹಳ್ಳಿಗಳಲ್ಲಿ ಹಾಗೂ ವಾರ್ಡುಗಳಲ್ಲಿ ಜೆ.ಇ ಲಸಿಕಾ ಕಾರ್ಯಕ್ರಮದ ಕುರಿತು, ಕಸ ವಿಲೇವಾರಿ ಮಾಡುವ ಗಾಡಿಯ ಮುಖಾಂತರ ಮೈಕಿಂಗ್ ಹಾಗೂ ಡಂಗೂರ ಸಾರುವ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿಯ 1ನೇ ತರಗತಿಯಿಂದ 10ನೇ ತರಗತಿ ಎಲ್ಲಾ ಮಕ್ಕಳಿಗೆ ಜೆ.ಇ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು. ಒಟ್ಟಾರೆಯಾಗಿ ತಾಲೂಕಾ ಮಟ್ಟದ ಜೆ.ಇ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ಮುಂಡರಗಿ ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಟಿ.ಎಸ್. ಅವರು ಮಾತನಾಡಿ  ಡಿಸೆಂಬರ್ 5 ರಿಂದ 24 ರವರೆಗೆ  ಜೆ.ಇ ಲಸಿಕಾ ಕಾರ್ಯಕ್ರಮದ ಅಭಿಯಾನ ನಡೆಯುತ್ತಿದ್ದು ,  ಈಗಾಗಲೇ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ 10 ಜಿಲ್ಲೆಗಳಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಹೆಚ್ಚುವರಿಯಾಗಿ 11 ಜಿಲ್ಲೆಗಳಲ್ಲಿ ಜೆ.ಇ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.  ಈ ಅಭಿಯಾನದಲ್ಲಿ 1 ರಿಂದ 15 ವರ್ಷದ ಮಕ್ಕಳಿಗೆ ಒಂದು ಡೋಸ್ ಜೆ.ಇ. ಲಸಿಕೆ ಚುಚ್ಚುಮದ್ದು ನೀಡಲಾಗುವುದೆಂದು ಹೇಳಿದರು.

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಎಮ್.ಎಸ್. ಸಜ್ಜನರ ಸರ್ವರನ್ನು ಸ್ವಾಗತಿಸಿ ಡಿಸೆಂಬರ 5 ರಿಂದ ಈ ಕಾರ್ಯಕ್ರಮ ಚಾಲನೆಗೊಳ್ಳುವುದು. ಡಿಸೆಂಬರ್ 1ನೇ ವಾರದಲ್ಲಿ 1ನೇ ತರಗತಿಯಿಂದ 10ನೇ ತರಗತಿ ಒಟ್ಟು ಮಕ್ಕಳು 26027 ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು. ನಂತರ 2ನೇ ವಾರದಲ್ಲಿ 1 ವರ್ಷದಿಂದ 6 ವರ್ಷದ ಒಟ್ಟು 9653 ಮಕ್ಕಳಿಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುವುದು. ಒಟ್ಟಾರೆಯಾಗಿ ತಾಲೂಕಿನಲ್ಲಿ 35680 ಮಕ್ಕಳಿದ್ದು ಎಲ್ಲಾ ಮಕ್ಕಳಿಗೆ ಒಂದು ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಬಿ.ಇ.ಓ ಎಮ್ ಎಫ್ ಬಾರ್ಕಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಎಮ್ ಎಮ್ ಇರಸನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.