ಜೆ.ಇ.ಇ.ಮೇನ್ಸ್ ದ್ವಿತೀಯ ಹಂತದ ಪರೀಕ್ಷೆ ಎಸ್.ಬಿ.ಆರ್.ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

ಕಲಬುರಗಿ,ಮಾ.26-2021ರ ಜೆ.ಇ.ಇ.ಮೇನ್ಸ್ ದ್ವಿತೀಯ ಹಂತದ ಪರೀಕ್ಷೆಯಲ್ಲಿ ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಶ್ರೀಮಂತ ಬಸವರಾಜ 98.8529318 ಪರ್ಸೆಂಟೈಲ್ ಪಡೆಯುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾನೆ. ಅಜಯ ಎಸ್.ಕುಲಕರ್ಣಿ 97.440156, ಜಯರ್ ರಮೇಶ ಭಾನುಶಾಲಿ 96.1669479, ನಾಗನಗೌಡ ಲಿಂಗನಗೌಡ 95.3664935, ರಾಘವೇಂದ್ರ ಎಸ್.ಭತಗುಣಕಿ 95.2508433, ಶಿವರಾಜ ಆರ್.ಕೊಳ್ಳಿ 94.4694161, ಯಶ್ ಸಂಜಯ ಮಾಳ್ವೆ 94.1155611, ಸುಮೀತ ಎಲ್.ಕುಲಕರ್ಣಿ 93.7238315, ಶಶಾಂಕ ರಮೇಶ 92.7562084, ಅಭಿಜೀತ್ ರವೀಂದ್ರ ಬಿರಾದಾರ 91.643272, ಮಲ್ಲಿಕಾರ್ಜುನ ದೇವಿಂದ್ರ 91.4367269, ಆರ್ಯನ್ ಎಸ್.ಕಲ್ಲೂರಕರ್ 90.59199 ಮತ್ತು ಗುರುಪ್ರಸಾದ ರೆಡ್ಡಿ ಎ.ಪಾಟೀಲ 90.1899669 ಪರ್ಸೆಂಟೈಲ್ ಗಳನ್ನು ಪಡೆದಿದ್ದಾರೆ.
ಜೆ.ಇ.ಇ.ಮೇನ್ಸ್ ಪರೀಕ್ಷೆಯು ನಾಲ್ಕು ಹಂತಗಳಲ್ಲಿ ನಡೆಯುತ್ತಿದ್ದು, ಈ ನಾಲ್ಕೂ ಹಂತಗಳಲ್ಲಿಯ ಪರ್ಸೆಂಟೈಲ್ ಗಳನ್ನು ಪರಿಶೀಲಿಸಿ ನಾಲ್ಕೂ ಹಂತದಲ್ಲಿನ ಅತಿ ಹೆಚ್ಚಿನ ಪರ್ಸೆಂಟೈಲ್ ಗಳನ್ನು ಪರಿಗಣಿಸಿ ಜೆ.ಇ.ಇ.ಅಡ್ವಾನ್ಸಡ್ ಪರೀಕ್ಷೆ ಬರೆಯಲು ಪ್ರವೇಶ ನೀಡಲಾಗುತ್ತದೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಸಾಧನೆಯನ್ನು ಗಮನಿಸಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಗುರು-ಶಿಷ್ಯರ ಶ್ರಮ ಸಂಸ್ಕೃತಿಗೆ ದೊರೆತ ಫಲಿತಾಂಶ ಇದಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆಯಲೆಂದು ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.
@12bc =ಗುರು-ಶಿಷ್ಯರ ಶ್ರಮ ಸಂಸ್ಕೃತಿಗೆ ದೊರೆತ ಫಲಿತಾಂಶ
ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಗುರು-ಶಿಷ್ಯರ ಶ್ರಮ ಸಂಸ್ಕೃತಿಗೆ ದೊರೆತ ಫಲಿತಾಂಶ ಇದಾಗಿದೆ. ಭವಿಷ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಪಡೆಯುವಂತಾಗಲಿ.
-ಪೂಜ್ಯ ಡಾ.ಶರಣಬಸವಪ್ಪ ಅಪ್ಪ
ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ