ಜೆಸ್ಕಾಂ ಸಿಬ್ಬಂದಿಗಳಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ

ಔರಾದ್:ಮೇ.28: ದೇಶ್ಯಾದ್ಯಂತ ಸದ್ಯ ಎರಡನೇ ಕೊರೋನಾ ಅಲೆಯದ್ದೇ ಮಾತು. ಸಿಕ್ಕ ಸಿಕ್ಕವರನ್ನು ತನ್ನ ತೆಕ್ಕೆಗೆಳೆಯುತ್ತಿರುವ ಈ ಕೊರೋನಾ ಜನ ಸಾಮಾನ್ಯರ ಬದುಕನ್ನೇ ನರಕವನ್ನಾಗಿಸಿದೆ. ಹೀಗಿರುವಾಗ ದೇಶದಲ್ಲಿ ಲಸಿಕೆ ಅಭಿಯಾನ ಮುಂದುವರೆದಿದೆ, ಹೀಗಾಗಿ ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆ ಮಾಡಿದೆ ಹಾಗೂ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಬ್ಬರು ಲಸಿಕೆ ಪಡೆಯುವ ಮೂಲಕ ಕೋವಿಡ ಮಹಾಮಾರಿಯಿಂದ ತನ್ನ ರಕ್ಷಣೆಯ ಜೊತೆಗೆ ಇತರರನ್ನು ರಕ್ಷಣೆ ಮಾಡಬೇಕಾಗಿದೆ.

ಔರಾದ್ ಜೆಸ್ಕಾಂ ಕಚೇರಿಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ತಹಸೀಲ್ದಾರ ಎಂ,ಚಂದ್ರಶೇಖರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ರವಿಕುಮಾರ ಕಾರಬಾರಿ ಅವರು ಚಾಲನೆ ನೀಡಿದರು, ಈ ಸಂಧರ್ಭದಲ್ಲಿ ಜೆಸ್ಕಾಂನ್ 50ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತ್ತು.

ಈ ಸಂದಂರ್ಭದಲ್ಲಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ರವಿಕುಮಾರ ಕಾರಬಾರಿ ಕೋವಿಡ್ ಸೋಂಕು ತಡೆಗೆ ಅರ್ಹ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಈಗಾಗಲೇ ನಾನೂ ಲಸಿಕೆ ಪಡೆದಿದ್ದು, ಯಾವುದೇ ಅಡ್ಡ ಪರಿಣಾಮ ಉಂಟಾಗಲ್ಲ. ಹೀಗಾಗಿ ಲಸಿಕೆ ಬಗ್ಗೆ ಭಯ, ಆತಂಕ ಬೇಡ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಇಂಜಿನೀಯರ ಖಾಜಾ ಮೈನೊದ್ದಿನ್, ವಿಲ್ಸನ್ ಜೋಜನೆಕರ್, ಜಗದೀಶ್ವರ್ ಭಂಡೆ, ಗಣಪತಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.