ಜೆಸ್ಕಾಂ ನ ನಾಗವೇಣಿ ವಯೋ‌ನಿವೃತ್ತಿ ಬೀಳ್ಕೊಡುಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮಾ 31 : ನಗರದ  ಕೆ ಇ ಬಿ ಫಂಕ್ಷನ್ ಹಾಲ್ ನಲ್ಲಿ ನಿನ್ನೆ ವಯೋನಿವೃತ್ತಿ ಹೊಂದಿದ ಇಲ್ಲಿನ ಜೆಸ್ಕಾಂನ ಬೃಹತ್ ಕಾಮಗಾರಿ ವಿಭಾಗದ ಹಿರಿಯ ಸಹಾಯಕಿ 
ಜೆ.  ನಾಗವೇಣಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ.  ಬಸವರಾಜ್ ಅವರು ನಾಗವೇಣಿ ಅವರನ್ನು  ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂನ ಲೆಕ್ಕಾಧಿಕಾರಿ  ಜಯಮ್ಮ ಮತ್ತು ಅಧೀಕ್ಷಕ ಅಭಿಯಂತರರು, ಉಪ ಲೆಕ್ಕ ನಿಯಂತ್ರಣ ಅಧಿಕಾರಿಗಳು, ಲೆಕ್ಕಾಧಿಕಾರಿಗಳು, ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು,  ಕಾರ್ಮಿಕ ಮುಖಂಡರು ನಾಗವೇಣಿ ಕುಟುಂಬದ ಸದಸ್ಯರು  ಉಪಸ್ಥಿತರಿದ್ದರು