ಜೆಸ್ಕಾಂ ಕಛೇರಿಗೆ ಬೀಗ ಜಡಿದು ಹತ್ತು ತಾಸು ವಿದ್ಯುತ್ ಗೆ ರೈತರ ಒತ್ತಾಯ

ಸಿಂಧನೂರು ಅ.೧೮ ತಾಲೂಕಿನ ಒಳಬಳ್ಳಾರಿ ,ಗೋಮರ್ಸಿ ,ಮಾಡಶಿರವಾರ ,ಗಿಣಿವಾರ ,ಗೊಣ್ಣಿಗನೂರು ,ಆರ್.ಎಚ್ ಕ್ಯಾಂಪ್ – ೧ ಗ್ರಾಮಗಳ ರೈತರು ತಮಗೆ ದಿನದ ಹತ್ತು ಗಂಟೆಗಳ ಕಾಲ ವಿದ್ಯುತ್ ನೀಡುವಂತೆ ಒತ್ತಾಯಿಸಿ ಜೆಸ್ಕಾಂ ಕಛೇರಿ ಗೆ ಬೀಗ ಹಾಕಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಮಂಗಳವಾರ ದಂದು ತಾಲೂಕಿನ ಕೆಳ ಭಾಗದ ರೈತರು ಜೋಳ ,ಭತ್ತ ಬೆಳೆಗಳನ್ನು ಹಾಕಿದ್ದು ಅವೈಜ್ಞಾನಿಕ ವಾಗಿ ವಿದ್ಯುತ್ ಲೊಡ್ ಶೆಡ್ಡಿಂಗ್ ದಿಂದ ,ನೀರು ಇಲ್ಲದಿರುವದರಿಂದ ಬೆಳೆಗಳು ಒಣಗುತ್ತಿದ್ದು ಇದಕ್ಕೆ ಸಾಕಷ್ಟು ಸಲ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ,ಸಾಕಾಗಿ ರೋಸಿ ಹೋಗಿ ಕೊನೆಗೆ ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ ರವರು ರೈತರ ಸಂಕಷ್ಟ ಗಳನ್ನು ಅರಿತು ಜೆಸ್ಕಾಂ ಕಛೇರಿಗೆ ಹೋಗಿ ಬೀಗ ಜಡಿಯುವಲ್ಲಿ ಮುಂದಾದರು.ಆಗ ಅಧಿಕಾರಿಗಳ ಹಾಗೂ ರೈತರ ಮದ್ಯ ವಾಗ್ವಾದ ನಡೆದು ಕೊನೆಗೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ಅವರು ಅಧಿಕಾರಿಗಳಿಗೆ ವಿದ್ಯುತ್ ಕೇಳಿದರೆ ಕೇಸ್ ಮಾಡುತ್ತಿರಾ ? ಮಾಡಿ ,ನನ್ನ ಮೇಲೆ ಕೇಸ್ ಮಾಡಿ .ನೀವು ಸರ್ಕಾರಿ ಅಧಿಕಾರಿಗಳಾ ಅಥವಾ ಶಾಸಕರ ಹಿಂಬಾಲಕರಾ ? ಅಧಿಕಾರಿಗಳಿಗೆ ತಾಕೀತು ಮಾಡಿ ಕಛೇರಿ ಮುಂದೆ ಪಟ್ಟು ಹಿಡಿದು ಕುಳಿತಾಗ ಕೊನೆಗೆ ಮಣಿದ ಅಧಿಕಾರಿಗಳು ಕರಿಯಪ್ಪ ಅವರಿಗೆ ಕ್ಷಮೆ ಕೇಳಿ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದರು.
ಸಮಾಧಾನದ ಕೆಲಸ : ಕಾಂಗ್ರೆಸ್ ಮುಖಂಡರಾದ ಬಾಬುಗೌಡ ಬಾದರ್ಲಿ ಸ್ಥಳಕ್ಕೆ ಆಗಮಿಸಿ ಶಾಸಕರು ಊರಲ್ಲಿ ಇಲ್ಲ ಈ ವಿಷಯವಾಗಿ ಮುಖ್ಯಮಂತ್ರಿ ಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸಲಾಗುತ್ತದೆಂದು ಪ್ರತಿಭಟನಾ ನಿರತ ರೈತರ ಮನವೊಲಿಸಲು ಪ್ರಯತ್ನಿಸಿದರು.ಪ್ರತಿಭಟನೆ ಯಲ್ಲಿ ನೂರಾರು ರೈತರು ಭಾಗವಹಿಸಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.