ಜೆಸ್ಕಾಂ ಕಚೇರಿಯಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ

ಬೀದರ್:ಎ.15: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಸಂಸ್ಥೆ ವೃತ್ತ ಮತ್ತು ವಿಭಾಗೀಯ ಸಮಿತಿ ವತಿಯಿಂದ ಇಲ್ಲಿನ ಜೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಆಣದೂರಿನ ಧಮ್ಮ ದರ್ಶನ ಭೂಮಿ ವೈಶಾಲಿ ನಗರದ ಪೂಜ್ಯ ಭಂತೆ ಜ್ಞಾನಸಾಗರ ಮಾತನಾಡಿ, ಬಾಬಾ ಸಾಹೇಬರು ನೀಡಿದ ಸಂವಿಧಾನ ನಮಗೆ ಧರ್ಮಗ್ರಂಥ ಇದ್ದ ಹಾಗೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅನುಸರಿಸಿದರೆ ಸೌಹಾರ್ದತೆ ಸಮಾಜ ನಿರ್ಮಿಸಬಹುದು ಎಂದರು.

ಕಲಬುರಗಿಯ ಸರ್ಕಾರಿ ಕಾಲೇಜಿನ ಡೀನ್ ವಿಜಯಕುಮಾರ ಸಾಲಿಮನಿ, ಕಲಬುರಗಿಯ ಚಿಂತಕ ಅನೀಲ ಟೆಂಗಳಿ ಉಪನ್ಯಾಸ ನೀಡಿದರು. ಜೆಸ್ಕಾಂ ಅಧೀಕ್ಷಕ ಅಭಿಯಂತರ ಸಚಿನ್ ಹುಂಡೇಕರ್ ಉದ್ಘಾಟಿಸಿದರು. ಕಾರ್ಯನಿರ್ವಾಹಕ ಅಭಿಯಂತರ ರಮೇಶ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಬಸವರಾಜ ಜೈನಾಪೂರ, ವೀರಣ್ಣಾ ಮುದನಾಳೆ, ಶಂಕರ ಪಸರ್ಗಿ, ಶ್ರೀಮಂತ ಪಿ. ಹಾಲಹಳ್, ಅಶೋಕ ರೆಡ್ಡಿ, ಭರತ ಭೂಷಣ, ಪ್ರಕಾಶ ವರ್ಮಾ, ಸತೀಶ ಹೆಬ್ಬಾಳಕರ್, ಶೇಶಿರೇಖಾ ಪಾಟೀಲ, ಬಾಬುರಾವ ಟ್ಯಾಂತ, ಸೂರ್ಯಕಾಂತ ಬೋಗಾರ, ಧನಶೆಟ್ಟಿ ಮಲಗೊಂಡ ಇತರರಿದ್ದರು.