ಜೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ

ರಾಯಚೂರು.ಜ೨೩:ಗುತ್ತಿಗೆದಾರನ ಬಳಿ ೧೦,೦೦೦ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಅದರಲ್ಲಿ ೫೦೦೦ ರೂಪಾಯಿ ಹಣವನ್ನು ಫೋನ್‌ಪೇ ಮೂಲಕ ಪಡೆಯುತ್ತಿದ್ದ ಲಿಂಗಸೂಗೂರು ಜೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೆಂಚಪ್ಪ ಎಇಇ ಲೋಕಾ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಜೆಸ್ಕಾಂ ಗುತ್ತಿಗೆದಾರ ನಾಯಕ್ ಎಂಬುವವರ ಬಳಿ ೧೦,೦೦೦ ರೂ. ಲಂಚಕ್ಕೆ ಬೇಡಿಕೆ ಭ್ರಷ್ಟ ಅಧಿಕಾರಿ ಕೆಂಚಪ್ಪ. ಬೇಡಿಕೆಯಂತೆ ೫೦೦೦ ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದ ಕೆಂಚಪ್ಪ. ಉಳಿದ ೫೦೦೦ ರೂಪಾಯಿ ಹಣ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಎಇಇ ಅಧಿಕಾರಿ ಕೆಂಚಪ್ಪರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಇದ್ದಕ್ಕಿದ್ದಹಾಗೆ ಎಇಇ ಆರೋಗ್ಯದಲ್ಲಿ ಏರುಪೇರಾಗಿದೆ. ವಿಚಾರಣೆ ಮೊಟಕುಗೊಳಿಸಿ ಲಿಂಗಸೂರು ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಿದ ಅಧಿಕಾರಿಗಳು. ತೀವ್ರ ವಾಂತಿಯಿಂದ ಬಳಲುತ್ತಿರುವ ಭ್ರಷ್ಟ ಅಧಿಕಾರಿ ಕೆಂಚಪ್ಪ. ಲಿಂಗಸೂಗೂರಿನ ಜೆಸ್ಕಾಂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು.ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.