ಜೆಸ್ಕಾಂ ಎಂಡಿ ಧೋರಣೆ ವಿರೋಧಿಸಿದವಿದ್ಯುತ್ ಗುತ್ತಿಗಾದಾರರ ಸಂಘ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.31: ವಿದ್ಯುತ್ ಕಾಮಗಾರಿಗಳ ತುಂಡು ಗುತ್ತಿಗೆಯನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡುವ ವಿಷಯದಲ್ಲಿ ಜೆಸ್ಕಾಂ ಎಂ.ಡಿ.ಅವರು ತೋರುತ್ತಿರುವ ಧೋರಣೆಯನ್ನು ವಿದ್ಯುತ್ ಗುತ್ತಿಗಾದಾರರ ಸಂಘ ಖಂಡಿಸಿದೆ.
ಸಂಘದ ಬಳ್ಳಾರಿಯ ಗೌರವ ಅಧ್ಯಕ್ಷ ಕೆ.ಜಗನ್ ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಈ ಮೊದಲು 5 ಲಕ್ಷ ರೂ.ಗಳ ವರೆಗಿನ ವಿದ್ಯುತ್ ಕಾಮಗಾರಿಯ  ತುಂಡು ಗುತ್ತಿಗೆಯನ್ನು ಜೆಸ್ಕಾಂ  ನೀಡುತ್ತಿತ್ತು. ಅದನ್ನು ಸರ್ಕಾರ ರದ್ದು ಪಡಿಸಿತ್ತು. ಅದಕ್ಕಾಗಿ ಸಂಘದಿಂದ ಹೋರಾಟ ಮಾಡಿದಾಗ ಸರ್ಕಾರ ಮತ್ತೆ ಈ ಮೊದಲಿನಂತೆ  5 ಲಕ್ಷ ರೂ.ಗಳ ವರೆಗಿನ ಗುತ್ತಿಗೆಯನ್ನು  ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕೆಂದು ಆದೇಶಿಸಿತ್ತು.
ಆದರೆ  ಜೆಸ್ಕಾಂ ಈ ಆದೇಶವನ್ನು ಉಲ್ಲಂಘಿಸಿ  ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೆ ಕಾರಣ ಜೆಸ್ಕಾಂ ಎಂ.ಡಿ.ಅವರ ಧೋರಣೆಯೇ ಕಾರಣವಾಗಿದೆ. ಈ ಆದೇಶ ಹಿಂಪಡೆದು ಯಥಾ ರೀತಿ ಮುಂದುವರೆಸಬೇಕಿದೆ.
ಆದೇಶ ಹಿಂಪಡೆಯುವಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇಂಧನ ಸಚಿವ ಆದೇಶ ಹಿಂಪಡೆಯುವುದಾಗಿ ಹೇಳಿದರೂ ಜೆಸ್ಕಾಂ ಹಿಂಪಡೆಯುತ್ತಿಲ್ಲ. ಜೆಸ್ಕಾಂ ನವರು ಏಳು ಜಿಲ್ಲೆಗಳ ತುಂಡು ಗುತ್ತಿಗೆಗಳನ್ನು ಬಲ್ಕ್ ಆಗಿ ಕಾರ್ಪೊರೇಟ್ ಕಂಪನಿಗಳಿಗೆ ಗುತ್ತಿಗೆ ನೀಡಲು ಮುಂದಾಗುತ್ತಿದ್ದಾರೆ. ಇದರಿಂದ ಏಳು ಜಿಲ್ಲೆಗಳ 5000 ವಿದ್ಯುತ್  ಗುತ್ತಿಗೆದಾರರು, 10 ಸಾವಿರ ಕಾರ್ಮಿಕರಿಗೆ ಅನ್ಯಾಯವಾಗಲಿದೆಂದು ಹೇಳಿದರು.