ಜೆಸ್ಕಾಂ ಇಲಾಖೆಯಲ್ಲಿ ಭ್ರಷ್ಟಾಚಾರ – ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆರೋಪ

ಹಗರಿ ಬೊಮ್ಮನಹಳ್ಳಿ.ಜ.೧೨ ಜೆಸ್ಕಾಂ ಇಲಾಖೆಯಲ್ಲಿ ಭ್ರಷ್ಟಾಚಾರ ಕಂಡರಿಯದಷ್ಟು ಮಿತಿಮೀರಿ ನಡೆಯುತ್ತದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್ ಗಂಭೀರ ಆರೋಪ ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸೋಮವಾರ ಮಾತನಾಡಿ ರೈತರು ಕಂಬ ಮತ್ತು ತಂತಿಯ ಕೇಳಲು ಬಂದರೆ ಕೊಡುವುದಿಲ್ಲ ಬೇರೆ ಯಾರೋ ದುಡ್ಡು ಕೊಟ್ಟರೆ ಅವರಿಗೆ ಕೊಡುತ್ತೀರಾ ನೀವು ಸರ್ಕಾರ ಕೊಡುವ ಅನುದಾನವನ್ನು ಮಾರಿ ಕೊಳ್ಳುತ್ತಿದ್ದೀರಾ ಹಂಪಸಾಗರ ಭಾಗದಲ್ಲಿ ಕಾಮಗಾರಿಗೆ ಸಂಬಂಧಪಟ್ಟ ಸಾಮಗ್ರಿಗಳು ಡ್ರಾ ಆಗಿವೆ ಆದರೆ ಅಲ್ಲಿಗೆ ತಲುಪದೆ ಬೇರೆ ಕಡೆ ಹೋಗಿದೆ ಎಲ್ಲಿ ಹೋಗಿದೆ ಅಂತ ಕೇಳಿದರೆ ಇಲಾಖೆಯ ಎಇಇ ತೇಜ್ ನಾಯ್ಕ ಅವರು ಇದರ ಬಗ್ಗೆ ಕಾರ್ಯನಿರ್ವಾಹಕ ಇಂಜಿನಿಯರ್ ಕೇಳಬೇಕು ಎಂದು ಹೇಳಿದರು. ಅದಕ್ಕೆ ಸದಸ್ಯರು ಅವರನ್ನು ಕರೆಸಿ ಎಂದು ಹೇಳಿದರು. ಅವರ ನಂಬರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತದೆ ಎಂದು ಅಧಿಕಾರಿ ತಿಳಿಸಿದರು. ನೀವು ಒಬ್ಬರ ಮೇಲೆ ಒಬ್ಬರು ಹೇಳುತ್ತಾ ಜಾರಿ ಕೊಳ್ಳುತ್ತಿದ್ದೀರಾ ನಿಮಗೆ ಸರ್ಕಾರ ಸಂಬಳ ಕೊಡುವುದಿಲ್ಲವೇ ಎಂದು ಕಿಡಿಕಾರಿದರು..ಇದನ್ನು ಅಧ್ಯಕ್ಷರು ನಡವಳಿಕೆಯಲ್ಲಿ ದಾಖಲಿಸುವಂತೆ ಸೂಚಿಸಿದರು. ಅದಲ್ಲದೆ ಎಂ ಡಿ ಗೆ ಪತ್ರ ಬರೆದಂತೆ ಹೇಳಿದರು.
ಕೃಷಿ ಇಲಾಖೆಯ ಅಧಿಕಾರಿ ಜೀವನ್ ಸಾಬ್ ತಾಲೂಕಿನ ಕೃಷಿ ಚಟುವಟಿಕೆಗಳ ಬಗ್ಗೆ ವರದಿ ಒಪ್ಪಿಸುವಾಗ ಸದಸ್ಯ ಸೊನ್ನದ ಪ್ರಭಾಕರ್ ಅಧಿಕಾರಿಗೆ ರೈತ ಬೆಳೆದ ಶೇಂಗಾ ಚಿಕ್ಕೆ ರೋಗ ಬಂದು ಹಾಳಾಗಿದೆ ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದರು. ಇದಕ್ಕೆ ಎಡಿ ಉತ್ತರಿಸಿ ಹವಮಾನದ ವೈಪರಿತ್ಯದಿಂದ ಈ ರೀತಿ ಆಗಿದೆ ಇದಕ್ಕೆ ನಾವು ಏನು ಮಾಡಲು ಆಗಲ್ಲ ಎಂದು ಹೇಳಿದರು. ಇದಕ್ಕೆ ಸುಮ್ಮನಾಗದ ಸದಸ್ಯ ಸಮೀಕ್ಷೆ ಮಾಡಿ ವರದಿ ಸರ್ಕಾರಕ್ಕೆ ನೀಡಬೇಕು ಎಂದು ಹೇಳಿದರು.
ಕೊರೋನಾ ಲಸಿಕೆಯ ಬಗ್ಗೆ ಸದಸ್ಯ ಜಾಣ ಅನಿಲ್ ಪ್ರಶ್ನೆಗೆ ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಶಿವರಾಜ್ ಮಾತನಾಡಿ ತಾಲೂಕಿನಲ್ಲಿ ಒಟ್ಟು 2400 ಜನರಿಗೆ ಕೋವಿಡ್ ವ್ಯಾಕ್ಸಿಂಗ್ ಪೂರೈಸುವಂತೆ ಪಟ್ಟಿ ಕಳಿಸಲಾಗಿದೆ. ಮೊದಲ ಹಂತದಲ್ಲಿ ಕೊರನಾ ವಾರಿಯರ್ಸ್ ಗಳಿಗೆ ನೀಡಲಾಗುವುದು ತದನಂತರ 50 ವರ್ಷದ ಮೇಲ್ಪಟ್ಟವರಿಗೆ ಗುರುತಿಸಿ ಲಸಿಕೆ ಹಾಕಲಾಗುವುದು . ಈ ತಿಂಗಳಿನಿಂದ ಸಂಜೀವಿನಿ ಅ್ಯಪ್ ಜಾರಿ ಮಾಡಲಾಗುವುದು ಒಟ್ಟು 28 ಆರೋಗ್ಯ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಸಂಜೀವಿನಿ ಅ್ಯಪ ಮೂಲಕ ರೋಗಲಕ್ಷಣ ತಿಳಿಸಿದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದರು.
ಸದಸ್ಯ ಮಾಳಗಿ ಗಿರೀಶ್ ಶುದ್ಧ ಕುಡಿಯುವ ನೀರಿನ ಘಟಕ ಹಳ್ಳಿಗಳಲ್ಲಿ ದುರಸ್ತಿ ಮಾಡದೆ ಅವುಗಳು ತಿಂಗಳುಗಟ್ಟಲೆ ಕೆಟ್ಟು ನಿಂತಿವೆ ಎಂದು ಕೇಳಿದರು ಅದಕ್ಕೆ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದರು ಇದಕ್ಕೆ ಇಒ ಹಾಲಸಿದ್ದಪ್ಪ ಪೂಜೇರಿ ಮಾತನಾಡಿ ನೀವು ಸರಿಯಾಗಿ ಬಳಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಅವುಗಳ ದುರಸ್ತಿ ಮತ್ತು ಮೆಂಟೇನ್ ಮಾಡಲಾಗುತ್ತದೆ ಎಂದರು.
ತಾಲೂಕ ಪಂಚಾಯಿತಿ ಅಧ್ಯಕ್ಷೆ ಕೆ. ನಾಗಮ್ಮ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಬಿಕ್ಯಾ ಮುನಿಬಾಯಿ ಸದಸ್ಯರಾದ ತಿಪ್ಪೇರುದ್ರ ಮುನಿ ಕೋಗಳಿ ಶಾಮಲಾ ರಮೀಜಾ, ನೇತ್ರಾವತಿ, ಲೋಕೋಪಯೋಗಿ ಯ ಎಇಇ ಪ್ರಭಾಕರ್ ಶೆಟ್ಟಿ, ತೋಟಗಾರಿಕೆಯ ಪರಮೇಶ್ವರ್, ನರೇಗಾ ಸಹಾಯಕ ನಿರ್ದೇಶಕ ಮಲ್ಲನಗೌಡ, ಸಾಂಖ್ಯಿಕ ಅಧಿಕಾರಿ ಉಮೇಶ್ ಗೌಡ ನಿರ್ವಹಿಸಿದರು.