ಜೆಸ್ಕಾಂ ಇಂಜಿನೀಯರ್ಹುಸೇನ್ ಸಾಬ್ ಸಸ್ಪೆಂಡ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಸೆ.16: ಗುಲ್ಬರ್ಗಾ ವಿದ್ಯುಚ್ಛಕ್ತಿ ಮಂಡಳಿ ಜೆಸ್ಕಾಂ ನ  ನಗರದ ಕಚೇರಿಯಲ್ಲಿ  ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಹುಸೇನ್ ಸಾಬ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಲೋಕಾಯುಕ್ತರು  ಹುಸೇನ್ ಸಾಬ್ ಮನೆ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅವರು  ಸಂಪಾದನೆಗಿಂತ ಹೆಚ್ಚು ಸಂಪತ್ತು, ಆಸ್ತಿಯನ್ನು ಹೊಂದಿದ್ದಾರೆಂದು ಪ್ರಕರಣ ದಾಖಲಾದ ಹಿನ್ನಲೆಯಲ್ಲಿ  ಕಲಬುರಗಿಯ ಜೆಸ್ಕಾಂನ ಎಂ.ಡಿಯವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನಿವೃತ್ತ  ಯೋಧನಾಗಿ ಇವರು ಈ ಇಲಾಖೆ ಸೇರಿ ವಿವಿಧಡೆ ಕೆಲಸ ಮಾಡಿ, ಹೊಸಪೇಟೆಯಲ್ಲಿ ಒಮ್ಮೆ ಅಮಾನತ್ ಆಗಿ ನಂತರ ಬಳ್ಳಾರಿಗೆ ಬಂದಿದ್ದರು.
ಪ್ರಭಾವಿಯಾಗಿರುವ ಈತ ಯಾವುದೇ ಭ್ರಷ್ಟಾಚಾರಕ್ಕೆ ಹಿಂಜರಿಯಲ್ಲ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.