ಜೆಸಿಬಿ ಹರಿದು ೩ ಜನ ಕಾರ್ಮಿಕರ ಸಾವು

ದೇವದುರ್ಗ,ಜೂ.೧೪- ದೇವದುರ್ಗ ತಾಲೂಕಿನ ನೀಲಗುಂಜಿ ಗ್ರಾಮ ಹತ್ತಿರದ ಹೋಲದಲ್ಲಿ ಮಲಗಿದ್ದವರ ಮೇಲೆಜೆಸಿಬಿ ಹರಿದು ಮೂರು ಜನ ಛತ್ತೀಸ್ಗಢ ರಾಜ್ಯ ಬಂತೆವಾಡ ಜಿಲ್ಲೆಯ ಬೋರ್ ವೆಲ್ ಕೊರೆಯುವ ಕಾರ್ಮಿಕರು ಮೃತಪಟ್ಟ ದುರ್ಘಟನೆ ನಡೆದಿದೆ.೧೪/೬/೨೦೨೩ ರಂದು ಬೆಳಗಿನ ಜಾವ ೨:೦೦ ಸುಮಾರಿಗೆ ನೀಲವಂಜಿ ಗ್ರಾಮದಲ್ಲಿ ಹೊಲಕ್ಕೆ ಬೋರ್ವೆಲ್ ಕೊರೆದು ಬೋರ್ವೆಲ್ ಲಾರಿ ಪಕ್ಕದಲ್ಲಿ ಮಲಗಿಕೊಂಡಿದ್ದ, ಮೂರು ಜನ ಕಾರ್ಮಿಕರ ಮೇಲೆ ಜೆಸಿಬಿ ಹರಿದು ಸ್ಥಳದಲ್ಲಿಯೇ ಮೂರು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತ ಪಟ್ಟಕಾರ್ಮಿಕರು!೧) ವಿಷ್ಣು ತಂದೆ ಗದ್ರು ೨) ಬಲರಾಮ್೩) ಶಿವರಾಂ. ಜಾತಿ ಎಲ್ಲರೂ ಆದಿವಾಸಿಗಳಗಿದ್ದು ಗ್ರಾಮ ಬಲೆನ್ ಪಾಲ್ : ಜಿಲ್ಲೆ ದಂತವಾಡ, ಛತ್ತೀಸ್ಗಡ್ ರಾಜ್ಯ ಎಂದು ತಿಳಿದು ಬಂದಿದೆ. ಉಮಾ ಬೋರ್ವೆಲ್ಸ್ ಏಜೆನ್ಸಿ ಎಂಬ ಹೆಸರಿನ ಬೋರ್ ವೆಲ್ ಕೊರೆಯುವ ಏಜೆನ್ಸಿ ಸಿರವಾರದಲ್ಲಿದ್ದು,ಅದರ ಏಜೆಂಟ್ ರಾಘವೇಂದ್ರ, ಹಾಗೂ ಬೋರ್ವೆಲ್ ಕೊರೆಯುವ ವಾಹನದ ಮಾಲೀಕ ಆಂಧ್ರಪ್ರದೇಶದ ರಾಜು ಎಂಬುದಾಗಿ ತಿಳಿದು ಬಂದಿದೆ. ಇನ್ನೂ ಪ್ರಕರಣ ದಾಖಲಾಗಿಲ್ಲ.