ಜೆಸಿಬಿ ಯಂತ್ರ ಬಳಸಿ ಕಾಮಗಾರಿ- ಕ್ರಮಕ್ಕೆ ಆಗ್ರಹ

ರಾಯಚೂರು.ಏ.೨೩- ತಾಲೂಕಿನ ಸಿಂಗನೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ ಗೋಕಟ್ಟೆ ಹಾಗೂ ಕೃಷಿಹೊಂಡಾ ಕಾಮಗಾರಿಗಳು ಜೆಸಿಬಿ ಮತ್ತು ಡೋಜರ್ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ನಿರ್ವಹಿಸಿ ಕೂಲಿಕಾರರಿಗೆ ಮೋಸ ಮತ್ತು ವಂಚನೆ ಮಾಡುತ್ತಿರುವವರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಮುಖಂಡರು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿರು.
ಸಿಂಗನೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ ಗೋಕಟ್ಟೆ ಹಾಗೂ ಕೃಷಿಹೊಂಡಾ ಕಾಮಗಾರಿಗಳು ಜೆಸಿಬಿ ಮತ್ತು ಡೋಜರ್ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ ಇದರಿಂದ ಸರ್ಕಾರ ಹಣವನ್ನು ಕೊಳ್ಳೆ ಹೊಡೆಯುವುದಲ್ಲದೆ, ಕೂಲಿಕಾರರಿಗೆ ಮೋಸ ಮತ್ತು ವಂಚನೆ ಮಾಡುತ್ತಿದ್ದಾರೆಂದು ದೂರಿದರು.
ಸಕಾರದ ನಿಯಮಗಳನ್ನು ಗಾಳಿಗೆ ದೂರಿ ಭ್ರಷ್ಟಚಾರ ವೆಸಗಿದ್ದಾರೆ. ನೈಸರ್ಗಿಕ ಸಂಪನ್ಮೂಲ ನಿರ್ವಾಹಣೆ ಕಾಮಗಾರಿಗಳು ಪರಿಗಣಿಸಿ ತನಿಖೆ ಮಾಡಬೇಕು. ಕೂಡಲೇ ಕಾಮಗಾರಿಗಳನ್ನು ತನಿಖೆ ಮಾಡಿ ಸಂಬಂದೀಸಿ ಅಮಾನತ್ತುಗೊಳಿಸಿ ಕ್ರಿಮಿನಲ್ ಮೊಕ್ಕದಮೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಅಧ್ಯಕ್ಷ ರಂಜಿತ್ ದಂಡೋರ, ದೂಳಯ್ಯ ಗುಂಜಳ್ಳಿ, ಅಂಜಿನಯ್ಯ, ವಿನೋದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.