ಜೆಸಿಬಿ ಯಂತ್ರ ಬಡಿದು ಕಾರ್ಮಿಕನ ಸಾವು

ವಿಜಯಪುರ,ಜ.9- ಜೆಸಿಬಿ ಯಂತ್ರ ಬಡಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಸಂಭವಿಸಿದೆ.
ಜಿಲ್ಲೆಯ ಕೂಡಗಿ (ಎನ್ ಟಿ ಪಿ ಸಿ) ಉಷ್ಣ ವಿದ್ಯುತ್ ಸ್ಥಾವರದಲ್ಲ್ಲಿ ಕರ್ತವ್ಯನಿರತ ಕಾರ್ಮಿಕನಿಗೆ ಕಾಮಗಾರಿಯ ಕೆಲಸದಲ್ಲಿ ತೊಡಗಿದ್ದ ಜೆಸಿಬಿ ಯಂತ್ರ ಬಡಿದ ಪರಿಣಾಮವಾಗಿ ಸಾವನ್ನಪ್ಪಿದ್ದಾನೆ.
ಈ ಅವಘಡದಲ್ಲಿ ಸಾವನ್ನಪ್ಪಿದ ದುರ್ದೈವಿ ಕಾರ್ಮಿಕ ವಿಜಯಪುರ ನಗರದ ನಿವಾಸಿ ರಮೇಶ ಉಳ್ಳಾಗಡ್ಡಿ(40) ಎಂದು ಗುರುತಿಸಲಾಗಿದ್ದು, ವಿಷಯ ತಿಳಿಯುತ್ತಲೆ ಕೂಡಗಿ ಎನ್ ಟಿ ಪಿ ಸಿ ಠಾಣೆ ಪೆÇಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.