ಜೆಸಿಬಿ ಘರ್ಜನೆ ಅಕ್ರಮ ಅಂಗಡಿ, ಮನೆಗಳ ತೆರವು

ಮಾಲೂರು ಆ.೬- ಸಾರ್ವಜನಿಕರ ಪ್ರತಿಭಟನೆಯ ನಡುವೆ ತಾಲೂಕಿನ ಡಿ.ಎನ್.ದೊಡ್ಡಿ ಗ್ರಾ.ಪಂ.ನ ಸರ್ಕಾರಿ ಗೋಮಾಳ ಮತ್ತು ಜಾತ್ರೆ ಮೈದಾನದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿ ಮತ್ತು ಮನೆಗಳನ್ನು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.
ದೊಡ್ಡಿ ಗ್ರಾಮ ಪಂಚಾಯಿತಿ ಸರ್ಕಾರಿ ಜಾಗದ ಜಾತ್ರಾ ಮೈದಾನದಲ್ಲಿ ಅಕ್ರಮವಾಗಿ ಸಾರ್ವಜನಿಕರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಅಂಗಡಿ, ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳು ಹಾಗೂ ಅಂಗಡಿಗಳನ್ನು ತೆರವು ಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಆದೇಶದ ಮೇರೆಗೆ ತಹಶೀಲ್ದಾರ್ ಕೆ.ರಮೇಶ್ ನೇತೃತ್ವದಲ್ಲಿ ದೊಡ್ಡಿ ಗ್ರಾಮದ ರಸ್ತೆ ಬದಿಯಲ್ಲಿರುವ ಅಂಗಡಿಗಳು ತೆರವು ಗೊಳಿಸಿದರು.
ಇಲ್ಲಿನ ಅಂಗಡಿ ಮನೆಗಳ ನಿವಾಸಿಗಳು ಮಹಿಳೆಯರು ಮಕ್ಕಳು ಜೆಸಿಬಿ ಮೂಲಕ ತೆರುವು ಗೊಳಿಸುವ ಸಂದರ್ಭದಲ್ಲಿ ಜೆಸಿಬಿ ವಾಹನವನ್ನು ಅಡ್ಡಗಟ್ಟಿ ಪೆಟ್ರೋಲ್ ಬಾಟಲಿ ಇಟ್ಟುಕೊಂಡು ತೆರವು ಕಾರ್ಯಾಚರಣೆ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತೆರವುಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ತೆರವು ಕಾರ್ಯಾಚರಣೆಗೆ ಆಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾ.ಪಂ. ಸಿಬ್ಬಂದಿ ಪೋಲೀಸರು ತೆರವು ಕಾರ್ಯಾಚರಣೆ ಮಾಡಲು ಹರಸಾಹಸ ಪಡಬೇಕಾಯಿತು.
ಸುಮಾರು ಗಂಟೆಗಳ ಕಾಲ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರು ತೆರುವು ಗೊಳಿಸುವಂತೆ ಪಟ್ಟುಹಿಡಿದರು ಮಾತಿನ ಚಕಮಕಿ ನಡೆಯಿತು. ಕೊನೆಗೂ ಸ್ಥಳಕ್ಕೆ ತಹಶೀಲ್ದಾರ್ ಕೆ.ರಮೇಶ್ ಬೇಟಿ ನೀಡಿ ಸ್ಥಳದಲ್ಲಿ ವಾಸವಿರುವ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ವಾಸ ಇರುವ ಮನೆಗಳ ಕುಟುಂಬದವರು ೧ ವಾರದಲ್ಲಿ ಖಾಲಿ ಮಾಡುವಂತೆ ತಿಳಿಸಿ ರಸ್ತೆ ಬದಿಯಲ್ಲರುವ ಅಂಗಡಿಗಳು ತೆರುವುಗೊಳಿಸಿ ತೆರುವಾದ ಸ್ಥಳದಲ್ಲಿ ಗ್ರಾಮ ಪಂಚಾಯಿತಿಯಿಂದ ಅಂಗಡಿಗಳು ನಿರ್ಮಿಸಿ ವ್ಯಾಪಾರ ಮಾಡಲು ಅಂಗಡಿಗಳು ನೀಡುವುದಾಗಿ ಮತ್ತು ಮನೆ ಇಲ್ಲದವರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಗುರ್ತಿಸಿ ಸ್ಥಳ ನೀಡುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳು ನೇತೃತ್ವದಲ್ಲಿ ಜೆಸಿಬಿ ತೆರುವು ಗೊಳಿಸಿದ ಸಂದರ್ಭದಲ್ಲಿ ಹಲವಾರು ಮಹಿಳೆಯರು ಜೆಸಿಬಿ ಗೆ ಅಡ್ಡಲಾಗಿ ನಿಂತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯಗೆ ಯತ್ನಿಸಿದವರನ್ನು ಮಹಿಳಾ ಪೊಲೀಸ್ ಸಿಬ್ಬಂದಿ ತಡೆದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಧರ್ ಮತ್ತು ಸಬ್‌ಇನ್ಸ್‌ಪೆಕ್ಟರ್ ವರಲಕ್ಷ್ಮೀ ಮತ್ತು ಸಿಬ್ಬಂದಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಶ್ರೀಪತಿ, ಪಿಡಿಓ ಲೋಕೇಶ್, ಗಾ.ಪಂ. ಮಾಜಿ ಅಧ್ಯಕ್ಷ ಚಿಕ್ಕ ತಿಮ್ಮರಾಯಪ್ಪ, ವಪ್ಪಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಪ್ಪ, ನಾರಾಯಣಪ್ಪ, ದೊಡ್ಡಿ ರಾಜಪ್ಪ, ಇನ್ನಿತರರು ಹಾಜರಿದ್ದರು.