ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜು.೫; ತಾಲ್ಲೂಕಿನ ಕೊಮ್ಮನಳು ಗ್ರಾಮದಲ್ಲಿ ಒಂದು ವಾರದಿಂದ ಪೇಸೆಟ್ ಕಾಲೇಜ್ ನ ಎನ್ ಎಸ್ ಎಸ್ ಕ್ಯಾಂಪ್ ನಡೆಯುತ್ತಿತ್ತು, ಗ್ರಾಮಸ್ಥರಿಗೆ ವೈದ್ಯಕೀಯ ಆರೋಗ್ಯ ಶಿಬಿರ ಆಯೋಜಿಸಿದ್ದಾರೆ. ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದ ರಸ್ತೆ ಚರಂಡಿಗಳನ್ನು ಸ್ವಚ್ಚತಾ ಕಾರ್ಯ ಮಾಡುತ್ತಿದ್ದರೆ. ವಿವಿಧ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದೆ.ಜೆಸಿಐ ಶಿವಮೊಗ್ಗ ಸ್ಟಾರ್ಸ್ ವತಿಯಿಂದ ವಿಧ್ಯಾರ್ಥಿಗಳಿಗೆ ಗ್ರಾಮದ ಯುವಕರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸಿದ್ದರು. ಕೆ ಸಿ ನಂಜುಂಡ ಜೆಸಿಐ ಭಾರತ ವಲಯ ತರಬೇತುದಾರರು ಸುಮಾರು ಮೂರು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೆಸಿ ನವೀನ್ ತಲಾರಿ ಮತ್ತು ಜೆಸಿ ಅಶ್ವಿನಿ ಚಂದ್ರಶೇಖರ್ ಅವರು ಸೈಬರ್ ಕ್ರೈಂ ಬಗ್ಗೆ ಹಾಗೂ ಸಾಮಾಜಿಕ ಮಾದ್ಯಮದ ಪ್ರತಿಕೂಲ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಅಧಿಕಾರಿ ಪ್ರದೀಪ್, ಜೆಸಿ ಅಶ್ವಿನಿ ಚಂದ್ರಶೇಖರ್, ಜೆಸಿ ನಂಜುಂಡ , ಜೆಸಿ ನವೀನ್ ತಲಾರಿ, ಜೆಸಿ ಸಂತೋಷ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.