ಜೆರಾಕ್ಸ್ ಅಂಗಡಿ ಗಳ ಮುಂದೆ ವಿಧ್ಯಾರ್ಥಿಗಳು ಮೈಕ್ರೋ ಜೆರಾಕ್ಸ್ ಗೆ ಮೊರೆ…

ಮುದಗಲ್ಲ : ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗೆ ಒಂದೇ ದಿನ ಮಾತ್ರ ಬಾಕಿ ಉಳಿದಿವೆ. ವೇಳಾಪಟ್ಟಿಯ ಪ್ರಕಾರ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 31, 2023 ರಿಂದ ಆರಂಭವಾಗಲಿವೆ.

ಈ ಅಂತಿಮ ಪರೀಕ್ಷೆ ನಡೆಸಲು ಈಗಾಗಲೇ ಶಿಕ್ಷಣ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಈಗ ಮುದಗಲ್ಲ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ

ನಿಷೇಧಾಜ್ಞೆಯನ್ನು ಜಾರಿಗೊಳಿಸದ ಪ್ರದೇಶದಲ್ಲಿ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ 31-03-2023 ರಿಂದ 15-04-2023 ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಪರೀಕ್ಷೆಯ ದಿನಗಳ ವೇಳೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.

ಆದರೆ ಕೆಲವು ವಿಧ್ಯಾರ್ಥಿಗಳು ಹಾಗೂ ಯುವಕರು ಸಾಯಂಕಾಲ ಬಜಾರ್ ನಲ್ಲಿ ಇರುವ ಕೆಲವು ಮೈಕ್ರೋ ಜೆರಾಕ್ಸ್ ಅಂಗಡಿಗಳ ಮುಂದೆ ನಿಂತಿರುವುದು ಕಂಡು ಬರುತ್ತದೆ..