ಜೆಡಿ.ಎಸ್. ಪಕ್ಷದ ತಾಲೂಕು ಘಟಕದ ಅಧ್ಯಕ್ಷ ನಾನೇ- ಎನ್.ಸೋಮಪ್ಪ


ಸಂಜೆವಾಣಿ ವಾರ್ತೆ
ಸಂಡೂರು:ಮೇ: 17;  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ತಾಲೂಕು ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾದ ಕಾರಣಕ್ಕಾಗಿ ಕಮತೂರು ಮಲ್ಲೇಶಪ್ಪನವರನ್ನು ತಲೂಕು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಕಮತೂರು ಮಲ್ಲೇಶಪ್ಪ ಕೆ.ಅರ್.ಪಿ. ಪಕ್ಷ ಸೇರ್ಪಡೆಯಾದ ಪ್ರಯುಕ್ತ ತಾಲೂಕು ಅಧ್ಯಕ್ಷನಾಗಿ ನಾನೇ ಉಳಿದಿದ್ದೇನೆ ಅತಿ ಶೀಘ್ರದಲ್ಲಿಯೇ ನುತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಜೆ.ಡಿ.ಎಸ್. ಪರಾಜಿತ ಅಭ್ಯರ್ಥಿ ಎನ್. ಸೋಮಪ್ಪನವರು ಸಂಜೆವಾಣಿ ವರದಿಗಾರರ ಜೊತೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.