ಜೆಡಿಎಸ್ ಸೇವಾದಳ ವಿಭಾಗ ತಾಲೂಕು ಅಧ್ಯಕ್ಷರಾಗಿ ಹುಲಿಗೇಶ್ ಕೋಜ್ಜಿ ನೇಮಕ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.21: ಜೆಡಿಎಸ್ ಸೇವಾದಳ ವಿಭಾಗ ತಾಲೂಕು ಅಧ್ಯಕ್ಷರಾಗಿ ಹುಲಿಗೇಶ್ ಕೋಜ್ಜಿ ನೇಮಕವಾದರು. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ಅವರು ನೇಮಕ ಪತ್ರ ವಿತರಿಸಿದರು. ನಂತರ ರಾಜು ನಾಯಕ ಅವರು ಮಾತನಾಡಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಗಂಗಾವತಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗದುಕೊಂಡು ಸಂಘಟನೆ ಮಾಡಲು ತಿಳಿಸಿದರು. ನೇಮಕ ಪತ್ರ ಪಡೆದು ಮಾತನಾಡಿದ ಹುಲಿಗೇಶ್ ಕೊಜ್ಜಿ ಅವರು ರಾಜ್ಯ ಯುವ ಕಾರ್ಯಧ್ಯಕ್ಷರು ಆದ ರಾಜು ನಾಯಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಅವರು ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ಜೆಡಿಎಸ್ ಪಕ್ಷವನ್ನು ಗಂಗಾವತಿ ಕ್ಷೇತ್ರದಲ್ಲಿ ಬಲ ಪಡಿಸಲು ತಿಳಿಸುತ್ತೇನೆ ಎಂದು ಹೇಳಿದರು.