ಜೆಡಿಎಸ್ ಸಭೆ:ಕಾರ್ಯಕರ್ತರಿಗೆ ಮಾಹಿತಿ

ಕೋಲಾರ,ಮೇ.೪:ತಾಲೂಕಿನ ಚನ್ನಸಂದ್ರ ಗ್ರಾಪಂ ವ್ಯಾಪ್ತಿಯ ಕಡಗಟ್ಟೂರು ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪರವಾಗಿ ಸುಮಾರು ೨೦೦ ಕ್ಕೂ ಹೆಚ್ಚು ಹಳೆ ಜೆಡಿಎಸ್ ಮತ್ತು ಹೊಸ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು ಸಭೆಯಲ್ಲಿ ಚುನಾವಣೆಯ ಕುರಿತಂತೆ ಮುಂದಿನ ರೂಪುರೇಷಗಳ ಬಗ್ಗೆ ಚರ್ಚಿಸಲಾಗಿ ಬೂತ್ ಮಟ್ಟದ ಕಾರ್ಯಕರ್ತರನ್ನು ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ರಾಜ್ಯದಲ್ಲಿ ರೈತರ, ಬಡವರ ಪರವಾದ ಪಕ್ಷ ಅದು ಜೆಡಿಎಸ್ ಪಕ್ಷ ಮಾತ್ರವೇ ರಾಜ್ಯದಲ್ಲಿ ಸಾಮಾನ್ಯ ಜನರ ಸಂಕಷ್ಟಗಳನ್ನು ನಿವಾರಿಸಲು ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಅನಿಟ್ಟಿನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಗೆದ್ದು ವಿಧಾನಸಭೆ ಪ್ರವೇಶ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳು, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿಎಂಆರ್ ಶ್ರೀನಾಥ್ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾ ಇದ್ದು ಯಾರನ್ನೇ ಆಗಲಿ ಹಳಬರು ಹೊಸಬರು ಎನ್ನುವ ಬೇಧಭಾವ ಮಾಡದೇ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗಿದೆ ರಾಜ್ಯದಲ್ಲಿ ಕುಮಾರಸ್ವಾಮಿ ಪ್ರತಿಯೊಬ್ಬ ಬಡವರ, ರೈತರ ಕಣ್ಣಿ?ರು ಒರೆಸಬೇಕು ಹಂಬಲವಿದೆ. ರಾಜ್ಯದ ರೈತರಿಗಾಗಿ ಹೋರಾಟ ಮಾಡುತ್ತಿದ್ದಾರೆ ಅವರು ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ ರಾಜ್ಯದ ಜನರ ನೆಮ್ಮದಿಗಾಗಿ ಹೋರಾಟ ಮಾಡುತ್ತಾ ಇದ್ದು ಅವರ ಕೈ ಬಲಪಡಿಸಲು ಜೆಡಿಎಸ್ ಅಧಿಕಾರಕ್ಕೆ ಬರಬೇಕು ಅನಿಟ್ಟಿನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಕೆಲಸ ಮಾಡೋಣ ನಾವು ಎಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಒಬ್ಬ ಸಾಮಾನ್ಯ ರೈತನ ಮಗನಿಗೆ ಟಿಕೆಟ್ ನೀಡುವ ಮೂಲಕ ರೈತರ, ಸಾಮಾನ್ಯ ಜನರ ಪರವಾಗಿ ಜೆಡಿಎಸ್ ಪಕ್ಷ ಇದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಕ್ಷೆ?ತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಈಗಾಗಲೇ ಪಣ ತೊಟ್ಟಿದ್ದಾರೆ ಅವರಿಗೆ ನಮ್ಮೆಲ್ಲರ ಆರ್ಶೀವಾದ ಕೊಟ್ಟು ಗೆಲ್ಲಿಸಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದರು.
ಸಭೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಾತನಾಡಿ ನಮ್ಮ ಎಲ್ಲರ ಅಜೆಂಡಾ ಒಂದೇ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಅದಕ್ಕೆ ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್ ಗೆಲ್ಲಬೇಕು ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲಿದ್ದಾರೆ ಅದರ ಅನುಕೂಲಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಇಲ್ಲಿ ಕುಮಾರಸ್ವಾಮಿಯೇ ನಮ್ಮ ಅಭ್ಯರ್ಥಿ ಅನ್ನೋ ರೀತಿಯಲ್ಲಿ ಮತದಾರರಿಂದ ಓಟು ಹಾಕಿಸಿ ಗೆಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜೆಡಿಎಸ್ ಮಾಜಿ ಜಿಲ್ಲಾ ಅಧ್ಯಕ್ಷ ಬಣಕನಹಳ್ಳಿ ನಟರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಡಗಟ್ಟೂರು ದಯಾನಂದ್, ಯಲವಾರ ಸೊಣ್ಣೇಗೌಡ, ಮುಖಂಡರಾದ ಸಿಎಂಆರ್ ಹರೀಶ್, ಮಡಿವಾಳ ಗೋಪಾಲಪ್ಪ, ವಕ್ಕಲೇರಿ ರಾಮು, ಕಡಗಟ್ಟೂರು ವಿಜಯಕುಮಾರ್, ಜೆಟ್ ಅಶೋಕ್, ಲೋಕೇಶ್ ಮರಿಯಪ್ಪ, ಬಾಲಗೋವಿಂದ್, ಬಾಲಾಜಿ ಚನ್ನಯ್ಯ, ಜಮೀರ್ ಪಾಷ, ಖಾಜಿಕಲ್ಲಹಳ್ಳಿ ವಾನರಾಶಪ್ಪ, ತಿರುಮಲೇಶ್ ಆರ್.ಎ.ಪಿ ನಾರಾಯಣಸ್ವಾಮಿ, ಎಎ???ರ್ ದೇವರಾಜ್, ಬೈಚೇಗೌಡ, ಮುಂತಾದವರು ಇದ್ದರು