ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ

ಬೆಂಗಳೂರು, ಜ. ೪- ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿ ಜೆಡಿಎಸ್ ಕಛೇರಿಯಲ್ಲಿಂದು ನಡೆದ ಜೆಡಿಎಸ್‌ನ ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜೆಡಿಎಸ್ ಬಗ್ಗೆ ಅಪಪ್ರಚಾರ ಮಾಡುತ್ತೀವೆ. ಪಕ್ಷದ ಅಸ್ವಿತ್ವವೇ ಮುಗಿದು ಹೋಯಿತು ಎಂದು ಅಪಪ್ರಚಾರ ನಡೆಸಿವೆ ಯಾರು ಜೆಡಿಎಸ್‌ನ ಮುಗಿಸಲು ಸಾಧ್ಯವಿಲ್ಲ ಎಂದರು.
ಜೆಡಿಎಸ್‌ಗೆ ದೊಡ್ಡ ಪಡೆಯೇ ಇದೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಶಕ್ತಿ ಗೊತ್ತಾಗಿದೆ. ಸಂಕ್ರಾಂತಿ ನಂತರ ಪಕ್ಕದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಾಗುವುದು. ತಳ ಹಂತದವರೆಗೂ ಪಕ್ಷವನ್ನು ಕೊಂಡೊಯ್ಯಲಾಗುವುದು ಎಂದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅವರನ್ನು ತಾವು ಎಂದು ಭೇಟಿ ಮಾಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶಾಸಕ ಪರವಾಗಿ ಭೇಟಿ ಮಾಡಿದ್ದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದರು.
ಮುಂಬರುವ ಯಾವುದೇ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೆ ಹೊಂದಾಣಿಕೆ ಪ್ರಶ್ನೆಯೇಯಿಲ್ಲ ಜೆಡಿಎಸ್ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದರು.
ಬಿಜೆಪಿ ಪಾಪದಿಂದ ಗಳಿಸಿದ ಹಣದಿಂದ ಗ್ರಾಮ ಪಂಚಾಯಿತಿ ಚುನಾವಣೆ ಮಾಡಿದೆ. ಅವರದೇ ಪಕ್ಷದ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದರು.
ಕಾಂಗ್ರೆಸ್ ಶಾಲಿನಿಂದಲೇ ಜೆಡಿಎಸ್‌ನವರು ಪ್ರಧಾನಿ, ಸಿಎಂ ಆಗಿದ್ದು ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು ನಾವೇನು ಅವರ ಬಳಿ ಅರ್ಜಿ ಹಾಕಿಕೊಂಡು ಹೋಗಿದ್ದೇವಾ ಅವರಾಗಿಯೇ ನಮ್ಮ ಮನೆಗೆ ಬಂದಿದ್ದರು. ದೇವೇಗೌಡರು ಪ್ರಧಾನಿಮಾಡಿ ಎಂದು ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಹೋಗಿರಲಿಲ್ಲ ಎಂದು ತೀರುಗೇಟು ನೀಡಿದರು.
ಡಿ.ಕೆ. ಶಿವಕುಮಾರ್ ಅವರ ಆಟ ನನ್ನ ಹತ್ತಿರ ನಡೆಯುವುದಿಲ್ಲ. ಅವರಿಗೆ ದರ್ದು ಇತ್ತು. ನಮ್ಮ ಮನೆಗೆ ಬಂದ್ದಿದ್ದರು. ಅಧಿಕಾರಯಿಂದಾಗ ಡಿ.P. ಶಿವಕುಮಾರ್ ಏನು ಮಾಡಿದ್ದಾರೆ ಗೊತ್ತಿದೆ. ಬಂಡೆಗಳು ಹೊಡೆಯುತ್ತಿದ್ದಾಗ ಇವರು ರೈತರಿಗೆ ಏನು ಮಾಡಿದರು ಅಂತ ರೈತರೇ ಹೇಳುತ್ತಾರೆ. ನನ್ನ ಹತ್ತಿರ ಇವೆಲ್ಲ ನಡೆಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.