ಜೆಡಿಎಸ್ ಮಿತ್ರ ಶಾಸಕರು ಎಲ್ಲೂ ಹೋಗೋಲ್ಲ

ಕೋಲಾರ,ಅ,೧೮-ಕಾಂಗ್ರೆಸ್ ಪಕ್ಷದಲ್ಲಿ ಹಲವು ಮಿತ್ರ ಶಾಸಕರು, ಹಾಗೂ ನನಗೆ ಸಂಬಂಧಿಗಳು ಇದ್ದಾರೆ, ಒಟ್ಟಾಗಿ ಹೋಗೋಣ ಬಾ ಎಂದು ಕರೆದಿದ್ದಾರೆ, ನಾನು ಯಾವುದೇ ತೀರ್ಮಾನ ಹೇಳಿಲ್ಲ, ಮಾಡಿಲ್ಲ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿರುವ ಕುರಿತು ಕೋಲಾರದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಜೆಡಿಎಸ್ ಪಕ್ಷದ ಮಿತ್ರ ಶಾಸಕರು ಎಲ್ಲೂ ಹೋಗುವುದಿಲ್ಲ, ಲೋಕಸಭಾ ಚುನಾವಣೆ ಬರುತ್ತಿದೆ ಪಕ್ಷ ಸಂಘಟನೆ ಜವಾಬ್ದಾರಿ ಕೊಟ್ಟಿದೆ, ಮುಂದೆ ಜೆಡಿಎಸ್ ಪಕ್ಷ ಬೇಡವೆಂದರೆ ಬೇರೆ ಕಡೆ ಹೋಗುವ ಯೋಚನೆ ಮಾಡುವೆ ಸದ್ಯ ಎಲ್ಲೂ ಹೋಗಲ್ಲ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಸ್ಪರ್ಧೆಸುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ, ೧೩೬ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು ಇದ್ದರೂ,ಆಪರೇಷನಗೆ ಕೈ ಹಾಕಿದೆ, ಆ ಯೋಚನೆ ಕಾಂಗ್ರೆಸ್ ಪಕ್ಷಕ್ಕೆ ಏಕೆ ಬಂತೂ ಗೊತ್ತಿಲ್ಲ, ಅವರಲ್ಲಿ ಎರಡು ಗುಂಪು ಆಗಿದ್ದೀಯೋ, ಸೇಫ್ಟಿಗೊಸ್ಕರ ಮಾಡುತ್ತಿದ್ದೀಯೊ ಗೊತ್ತಿಲ್ಲ, ಮುಂದೆ ರಾಜಕಾರಣ ಯಾವ ದಿಕ್ಕಿಗೆ ಹೋಗುತ್ತೋ ಕಾದು ನೋಡಬೇಕಾಗಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಮೃದ್ದಿ ಮಂಜುನಾಥ್ ಖಾರವಾಗಿ ನುಡಿದ ಅವರು, ಜೆಡಿಎಸ್‌ನಲ್ಲಿ ೧೯ ಶಾಸಕರು ಗೆದ್ದರೂ ನೋವಿನಲ್ಲಿ ಇದ್ದಾರೆ, ಇಂತಹ ಸಂದರ್ಭದಲ್ಲಿ ಇಬ್ರಾಹಿಂ ಅವರ ತೇವಲುಗಳಿಗೆ ಚಿಂತನಾ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತವಲ್ಲ ಎಂದರು.
ಇಬ್ರಾಹಿಂ ಅವರ ಗಮನಕ್ಕೆ ಬಾರದೆ ಪಕ್ಷದಲ್ಲಿ ಏನು ನಡೆದಿಲ್ಲ, ಮತ್ತೊಂದು ದಿನ ನಾನು ಇವರ ಬಾಯಿ ಬಿಚ್ಚಬೇಕಾಗುತ್ತೆ,
ಹೈಕಮಾಂಡ್ ನನಗೆ ಬಾಯಿ ಬಿಚ್ಚಲು ಅನುಮತಿ ನೀಡಿಲ್ಲ, ಇಬ್ರಾಹಿಂ ಅವರು ತಮ್ಮ ತೇವಲುಗೋಸ್ಕರ ಮಾತನಾಡ ಬಾರದು, ಶಾಸಕರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
ನಿಖಿಲ್ ಕುಮಾರಸ್ವಾಮಿ ಸೋತ ಕಾರಣ ನೈತಿಕ ಹೊಣೆ ಹೊತ್ತು ಯುವ ಘಟಕಕ್ಕೆ ರಾಜಿನಾಮೇ ಕೊಟ್ಟರು, ಅಂದು ಇದರ ಹೊಣೆಯನ್ನು ತಾವು ಹೊರವುದಾಗಿ ಇಬ್ರಾಹಿಂ ಅವರು ಹೇಳಿದರು, ಇಬ್ರಾಹಿಂರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದು ಯಾರು?
ಕುಮಾರಸ್ವಾಮಿರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಹೇಳುವ ಇಬ್ರಾಹಿಂ ಮೊದಲು ಅವರ ಆತ್ಮಸಾಕ್ಷ್ಮಿಯನ್ನು ಮುಟ್ಟಿ ನೋಡಿಕೊಳ್ಳಲಿ, ಎಲ್ಲರ ಮನೆ ದೋಸೆ ತುತ್ತೇ ಎಂದು ವ್ಯಂಗ್ಯವಾಡಿದರು.
ರಾಷ್ಟ್ರೀಯ ಅಧ್ಯಕ್ಷರ ಒಪ್ಪಿಗೆ ಮೇರೆಗೆ ಮೈತ್ರಿ ಆಗಲು ನಿರ್ಧಾರ ಮಾಡಿರುವುದು, ಇಬ್ಬರು ಶಾಸಕರಲ್ಲಿ ಇದರ ಬಗ್ಗೆ ಅಸಮಾಧಾನವಿದೆ ಮತ್ತೆ ಯಾವ ಶಾಸಕರಿಗೂ ಆಭ್ಯಂತರವಿಲ್ಲ, ದಸರಾ ಮುಗಿದ ಮೇಲೆ ೧೯ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದೇವೆ, ಪ್ರತಿದಿನ ಒಂದೊಂದು ವಿದ್ಯಮಾನ ನಡೆಯುತ್ತಿದೆ. ಐಟಿ ರೈಡ್, ಕಾಂಗ್ರೆಸ್ ಶಾಸಕರ ಪ್ರವಾಸ, ಮುಂದೆ ಏನಾಗುತ್ತೆ ಕಾದು ನೋಡಬೇಕಾಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಲಾಯನ ಆಗುತ್ತಿದ್ದಾರೆ ಎಂಬ ಊಹಾಪೋಹಗಳು ಬರುತ್ತಿವೆ, ಯಾರು ಹೋಗಿರುವುದು ಕಣ್ಣಾರೆ ನೋಡಿಲ್ಲ ಎಂದು ಹೇಳಿದರು.