
ಮೈಸೂರು: ಏ.04:- ನಾನಂತೂ ಅಭ್ಯರ್ಥಿ ಆಗಲ್ಲ. ಯಾರಾದರೂ ಅಭ್ಯರ್ಥಿ ಆಗಲಿ. ನನ್ನ ಮುಂದಿನ ನಿರ್ಧಾರ ಇನ್ನೆರಡು ದಿನಗಳಲ್ಲಿ ತಿಳಿಸುವೆ ಎಂದು ನರಸಿಂಹ ರಾಜ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿಯಾಗಿದ್ದ ಅಬ್ದುಲ್ಲಾ ಹೇಳಿಕೆ ನೀಡುವ ಮೂಲಕ ಜಿಲ್ಲೆಯಲ್ಲೂ ತೆನೆಯ ಮತ್ತೊಂದು ವಿಕೇಟ್ ಸ್ಪರ್ಧೆಗೂ ಮುನ್ನವೇ ಬಹುತೇಕ ಪತನವಾಗಿದೆ.
ಅಬ್ದುಲ್ಲಾ ಅವರು ತಾವು ಕಾಂಗ್ರೆಸ್ ಸೇರುತ್ತಾರೆಂಬ ಊಹಾಪೆÇೀಹ ಕುರಿತು ಬೆಂಬಲಿಗರ ಸಭೆ ಬಳಿಕ ಮಾತನಾಡಿದ ಅವರು, ಆರು ತಿಂಗಳ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರು ಕ್ಷೇತ್ರದಲ್ಲಿ ನಿಲ್ಲುವ ಇಂಗಿತ ವ್ಯಕ್ತಪಡಿಸಿದರು. ಹೀಗಾಗಿ ಅವರ ಸ್ಪರ್ಧೆ ಹಿನ್ನೆಲೆಯಲ್ಲಿ ಅವರನ್ನು ಸ್ವಾಗಿತಿಸಿ, ನಾನು ಸುಮ್ಮನಾದೆ, ಇಷ್ಟು ದಿನವಾದರೂ ಅವರ ಸ್ಪರ್ಧೆ ಬಗ್ಗೆ ಹೇಳುತ್ತಿಲ್ಲ ಎಂಬ ಬೇಸರವಿದೆ. ಹೀಗಾಗಿ ನಾನು ತಟಸ್ಥನಾಗಿ ಇರಲು ಬಯಸಿದ್ದೇನೆ. ನಾನಂತೂ ಸ್ಪರ್ಧೆ ಮಾಡಲ್ಲ ಎಂದರು.
ಇನ್ನೂ ಯು.ಟಿ.ಖಾದರ್ ನಡುವಿನ ಸಂಪರ್ಕ ಕುರಿತ ಪ್ರಶ್ನೆಗೆ ಅವರ ಪ್ರತಿಕ್ರಯಿಸಿ, ಅವರು ನಮ್ಮ ಸಂಬಂಧಿ ಹೀಗಾಗಿ ಅವರ ಪರವಾಗಿ ಅವರ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡುತ್ತೇನೆ. ಅವರು ಗೆಲ್ಲಬೇಕಿದೆ. ಇನ್ನೂ ಕಾಂಗ್ರೆಸ್ ನಿಂದ ಹಲವು ಮಂದಿ ಸಂಪರ್ಕಿಸಿರುವುದು ನಿಜ. ಈ ಬಗ್ಗೆ ಬೆಂಬಲಿಗರು, ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ತಿಳಿಸುವೆ. ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.
ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದವರು ವಿಳಂಬ ನೀತಿ ಅನುಸರಿಸುತ್ತಿರುವುದು ತೀವ್ರ ಬೇಸರ ಮೂಡಿಸಿದೆ. ಇನ್ನಾದರೂ ವರಿಷ್ಠರು ಎಚ್ಚೆತ್ತುಕೊಳ್ಳಬೇಕು. ಕೂಡಲೇ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ಬೇರೆ ಪಕ್ಷಕ್ಕೆ ಬೆಂಬಲ ಕೊಡಬೇಕಾಗುತ್ತದೆ. ಪಕ್ಷವು ನನ್ನನ್ನು ಕಡೆಗಣಿಸುತ್ತಿದೆ. ನನ್ನ ಬೆಂಬಲಿಗರನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಇದರಿಂದ ಬೇಸರವಾಗಿದೆ. ಹೀಗಾಗಿ, ಸಂಘಟನೆಯಿಂದ ದೂರ ಉಳಿದಿದ್ದೇನೆ. ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದ ನನ್ನನ್ನು ಕಡೆಗಣಿಸಿರುವುದು ನೋವು ನೀಡಿದೆ. ಆದ್ದರಿಂದ, ನನ್ನ ಮುಂದಿನ ನಡೆಯನ್ನು ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ ಎಂದರು.
ಸಿಎಂ ಇಬ್ರಾಹಿಂ ಕ್ಷೇತ್ರದತ್ತ ಬಂದಿಲ್ಲ. ಅಲ್ಲದೇ, ಬೇರೆಯವರಿಗೆ ಜವಾಬ್ದಾರಿ ಕೊಡಲು ಹೊರಟಿದ್ದಾರೆ. ಇದರಿಂದಾಗಿ ನನಗೆ ಅಸಮಾಧಾನ ಆಗಿರುವುದು ನಿಜ. ಈ ಕಾರಣದಿಂದಾಗಿಯೇ, ಮೈಸೂರಿನಲ್ಲಿ ಈಚೆಗೆ ನಡೆದ ಪಂಚರತ್ನ ಯಾತ್ರೆ ಸಮಾರೋಪದಲ್ಲೂ ಪಾಲ್ಗೊಳ್ಳಲಿಲ್ಲ. ?ತರಾತುರಿಯಲ್ಲಿ ಕಣಕ್ಕಿಳಿಯುವಂತೆ ಹೇಳಿದರೆ ಸ್ಪರ್ಧಿಸುವುದಿಲ್ಲ. ನನಗೆ ಯಾವ ಪಕ್ಷ ಸೂಕ್ತ ಎನಿಸುತ್ತದೆಯೋ ಅದಕ್ಕೆ ನನ್ನ ಬೆಂಬಲ ನೀಡುತ್ತೇನೆ. ಈ ನಿಟ್ಟಿನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ ಎಂದು ಹೇಳಿದರು. ಹೋದ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದರು. ಈ ಬಾರಿಯೂ ಟಿಕೆಟ್ ಬಯಸಿದ್ದರು. ಆದರೆ, ಸದಸ್ಯ ಬಹುತೇಕ ಜೆಡಿಎಸ್ ತೊರೆಯುವುದು ಪಕ್ಕಾ ಎನ್ನಲಾಗಿದ್ದು, ಇನ್ನೆರಡು ದಿನಗಳಲ್ಲಿ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ.