ಜೆಡಿಎಸ್ ಬಿಜೆಪಿ ಒಗ್ಗಟ್ಟಿಗಿ ಕೆಲಸ ಮಾಡಿ ಬಾಲ ರಾಜ್‍ರನ್ನು ಗೆಲ್ಲಿಸೋಣ: ಎಂ.ಆರ್.ಮಂಜುನಾಥ್

ಸಂಜೆವಾಣಿ ವಾರ್ತೆ
ಹನೂರು ಏ 8 :- ದೇಶ ಮತ್ತು ರಾಜ್ಯದ ಹಿತ ದೃಷ್ಟಿಯಿಂದ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ರವರು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಮುಂದಿನ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಮೂಲಕ ದೇಶದ ಭವಿಷ್ಯವನ್ನು ಉಜ್ವಲ ಗೊಳಿಸಬೇಕು.
ಆದ್ದರಿಂದ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ರವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಜಯಶೀಲರಾದ ಮಾಡಲು ನಾವೆಲ್ಲ ಪ್ರಯತ್ನಿಸೋಣ ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ತಿಳಿಸಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಚಿಕ್ಕಲ್ಲೂರು, ಲೊಕ್ಕನಹಳ್ಳಿ ಮತ್ತು ಬಂಡಳ್ಳಿ ಗ್ರಾಮಗಳಲ್ಲಿ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ ಪರ ಮತ ಪ್ರಚಾರ ದಲ್ಲಿ ಭಾಗಿಯಾಗಿ ಮಾತನಾಡಿದ ಅವರು ನರೇಂದ್ರ ಮೋದಿ ಯವರ ಜನಪರ ಕಾಳಜಿ ಮತ್ತು ದೂರ ದೃಷ್ಟಿಯನ್ನು ಮನದಲ್ಲಿಟ್ಟುಕೊಂಡು 2047 ರ ಹೊತ್ತಿಗೆ ಪ್ರಪಂಚದಲ್ಲಿಯೇ ಭಾರತ ನಂಬರ್ ಒನ್ ದೇಶವಾಗಬೇಕು ಎಂಬ ಕನಸು ಹೊತ್ತಿರುವ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಾದರೆ ಚಾಮರಾಜನಗರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ರವರನ್ನು ಜಯಶೀಲಿರನ್ನಾಗಿ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ಮಾತನಾಡಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಅಭಿವೃದ್ಧಿ ಯೋಜನೆಗಳು ದೇಶವನ್ನು ಮುನ್ನಡೆಸುತ್ತಿದೆ. ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಸುಳ್ಳು ವಿಷಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ.
ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಗರೀಬಿ ಹಠವು ಎಂದು ಹೇಳಿಕೊಂಡು ಬರುತ್ತಿದೆ ಆದರೆ ಇಲ್ಲಿವರೆಗೆ ಬಡತನ ನಿರ್ಮೂಲನೆಯಾಗಿಲ್ಲ. ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಪ್ರಪಂಚದಲ್ಲೆ ಅಭಿವೃದ್ಧಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ನಿಂತಿರುವುದು ಸಾಕ್ಷಿಯಾಗಿದೆ.
ಕಾಂಗ್ರೆಸ್ ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಮತ ಕೇಳುತ್ತಿದೆ. ಆದರೆ ಬಾಬಾ ಸಾಹೇಬರ ನಿಧನದ ಸಂದರ್ಭದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಅವರ ಶವಸಂಸ್ಕಾರಕ್ಕೆ ಸ್ಥಳ ನೀಡಲಿಲ್ಲ. ಕೊನೆಗೆ ಸಮುದ್ರ ತೀರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾ ಯಿತು.ಈ ದುರ್ಘಟನೆಯನ್ನು ನೆನೆಸಿಕೊಂಡರೆ ಬಾಬಾ ಸಾಹೇಬರ ಹೆಸರನ್ನು ಹೇಳುವ ನೈತಿಕತೆ ಕಾಂಗ್ರೆಸ್ ಪಕ್ಷದವರಿಗಿ ಇಲ್ಲ.
ಬಿಜೆಪಿ ಪಕ್ಷವು ನನ್ನನ್ನು ಗುರುತಿಸಿ ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದುಕೊಂಡಿದ್ದೇನೆ. ಆದ್ದರಿಂದ ತಾವೆಲ್ಲ ಮತದಾರ ಬಂಧುಗಳು ಈ ಚುನಾವಣೆ ಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಂಡ್ಲಪೇಟೆ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಿರಂಜನ್ ಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷರಾದ ವೃಷಭೇಂದ್ರ ರಾಜು ಮುಖಂಡರಾದ ಪ್ರೀತಂನಾಗಪ್ಪ ದತ್ತೇಶ್ ಕುಮಾರ್ ನಿಶಾಂತ್ ವೆಂಕಟೇಶ್ ಜಯಸಂದ್ರ ಜೆಡಿಎಸ್ ಮುಖಂಡರಾದ ಮಂಜೇಶ್, ಉದ್ದನೂರು ಪ್ರಸಾದ್, ಶಿವಮೂರ್ತಿ, ಹಾಗೂ ಮುಖಂಡರು ಮತ್ತುಕಾರ್ಯಕ ರ್ತರು ಉಪಸ್ಥಿತರಿದ್ದರು.