ಜೆಡಿಎಸ್ ಬಲವರ್ಧನೆಗೆ ಕರೆ

ಕೋಲಾರ,ನ.೨೬: ಜಾತ್ಯತೀತ ಜನತಾ ಪಕ್ಷದ ಕೋಲಾರ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡೆಸುವಂತ ಹೆಚ್ಚುವರಿ ಜವಾಬ್ದಾರಿಯನ್ನು ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಣ್ಣ ನೀಡಿದ್ದಾರೆ. ಡಿಸೆಂಬರ್ ೧೦ ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದಿಂದ ದೂರ ಸರಿದಿರುವವರನ್ನು ಸಮಾಧಾನ ಪಡೆಸಿ ಕರೆತಂದು ಬಹುಮತದಿಂದ ಗೆಲ್ಲಿಸುವ ವಿಶ್ವಾಸವನ್ನು ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷೆ ರಾಜಾರಾಜೇಶ್ವರಿ ವ್ಯಕ್ತಪಡಿಸಿದರು.
ನಗರದಲ್ಲಿ ಮಾದ್ಯಮದರೊಂದಿಗೆ ಅವರು ಮಾತನಾಡಿ, ಬೆಂಗಳೂರಿನ ಪಕ್ಷದ ಕಚೇರಿಯಾದ ಜೆ.ಪಿ ಭವನದಲ್ಲಿ ಆಯೋಜಿಸಿದ್ದ ಜೆ.ಡಿ.ಎಸ್ ಸಭೆಯಲ್ಲಿ ಅಧಿಕಾರವನ್ನು ಸ್ವೀಕರಿಸಿದೆ. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ಶಾಸಕ ಚಿಂತಾಮಣಿ ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಳಬಾಗಿಲಿನ ಸಮೃದ್ದಿ ಮಂಜುನಾಥ್, ಸಿ.ಎಂ.ಆರ್. ಶ್ರೀನಾಥ್ ಮುಂತಾದವರ ಸಮ್ಮುಖದಲ್ಲಿ ತಾಲ್ಲೂಕು ಅಧ್ಯಕ್ಷ ಸ್ಥಾನವನ್ನು ಪ್ರಧಾನ ಮಾಡಿದರು, ಅವರು ನೀಡಿರುವ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.
ಕೋಲಾರ ಅವಿಭಜಿತ ಜಿಲ್ಲೆಯಲ್ಲಿ ಜನತಾ ಪಕ್ಷವು ಎಲ್ಲಾ ಕ್ಷೇತ್ರಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ದಾಖಲೆಯನ್ನು ನಿರ್ಮಿಸಿರುವುದು ಇತಿಹಾಸ ಪುಟಗಳಲ್ಲಿ ಕಾಣಬಹುದು, ಇಂಥಹ ದಾಖಲೆಯು ಮರುಕಳಿಸುವುದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮುಂದಿರುವ ಸವಾಲ್ ಅಗಿದೆ ಎಂದು ಪರಿಗಣಿಸ ಬೇಕಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು ಅವರು ಜಯಭೇರಿ ಬಾರಿಸುವಂತೆ ಎಲ್ಲರನ್ನು ಸಂಘಟಿಸಿ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗುವಂತೆ ಮಾಡಲಾಗುವುದು. ವಕ್ಕಲೇರಿ ರಾಮು ಅವರ ಕುಟುಂಬದಲ್ಲಿ ರಾಮು ಅವರ ತಂದೆ ಇರಗಪ್ಪ, ಆತ್ತೆ ಯಶೋಧಮ್ಮ, ಪತ್ನಿ ಚೌಡೇಶ್ವರಿ ಇವರುಗಳು ರಾಜಕೀಯ ಹಿನ್ನಲೆಯನ್ನು ಹೊಂದಿದವರಾಗಿದ್ದು ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದಿದ್ದು ಚುನಾವಣೆಯಲ್ಲಿ ಎಲ್ಲರ ಸಹಕಾರ, ಮಾರ್ಗದರ್ಶನದಿಂದ ಯಶಸ್ವಿ ಸಾಧಿಸುವುದು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಭವಿಷ್ಯ ನುಡಿದರು.
ವರಿಷ್ಠರಾದ ಹೆಚ್.ಡಿ. ಕುಮಾರಣ್ಣ ರವರಿಂದ ಜಾತ್ಯತೀತ ಜನತಾ ಪಕ್ಷದ ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ನೇಮಕಗೊಂಡಿರುವ ನೇಮಕಾತಿ ಪತ್ರವನ್ನು ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್, ಮಾಲೂರಿನ ಜಿ.ಇ ರಾಮೇಗೌಡರ ಉಪಸ್ಥತಿಯಲ್ಲಿ ಪಡೆದುಕೊಂಡರು.