ಜೆಡಿಎಸ್ ಪ್ರಚಾರ ವಾಹನ ಮೇಲೆ ದಾಳಿ ಮೂವರಿಗೆ ಗಂಭೀರ ಗಾಯ

ದೇವದುರ್ಗ : ಜೆಡಿಎಸ್ ಪಕ್ಷದಿಂದ ಆಯೋಜನಗೊಂಡ ಪಂಚರತ್ನ್ ಪ್ರಚಾರ ವಾಹನದ ಮೇಲೆ ದೇವತಗಲ್ ಗ್ರಾಮದಲ್ಲಿ ಬಿಜೆಪಿ ಕಾಂಗ್ರೆಸ್ ಬೆಂಬಲಿಗರಿಂದ ಕಲ್ಲಿನಿಂದ ದಾಳಿ ಮಾಡಿದ್ದಾರೆ.ಈ ಘಟನೆಯಲ್ಲಿ ಜೆಡಿಎಸ್ ಮೂರು ಪ್ರಚಾರಕರು ಗಾಯಗೊಂಡಿದ್ದಾರೆ ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಅರಕಲಗೂಡ ನಿಂದ ಬಂದಿದ್ದ ವಾಹನ ಚಾಲಕ ಶ್ರೀನಿವಾಸ್ ದೇವದುರ್ಗದ ಹನುಮಗೌಡ ಹಾಗೂ ರಮೇಶ್ ಅವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು ,ಚಾಲಕ ತಲೆಗೆ ಭಾರಿ ಪೆಟ್ಟು ಬಿದ್ದಿರುವುದರಿಂದ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಿಸಲಾಗಿದೆ.
ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಅವರು ಜಾಲಹಳ್ಳಿ ಠಾಣೆ ಎದುರು ತಡರಾತ್ರಿಯಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನಿಬ್ಬರು ಗಾಯಾಳುಗಳು ಹಾಗೂ ಜೆಡಿಎಸ್ ಸಾವಿರಾರು ಕಾರ್ಯಕರ್ತರು ಪೊಲೀಸ್ ಠಾಣೆ ಎದುರುಗಡೆ ಪ್ರತಿಭಟನೆ ನಡೆಸಿದರು. ಕಲ್ಲು ತೂರಾಟ ಮಾಡಿದವರ ವಿರುದ್ಧ ಕೂಡಲೇ ದೂರು ದಾಖಲಿಸಿ ಕೊಂಡು ಬಂಧಿಸುವಂತೆ ಒತ್ತಾಯಿಸದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರ ನಿಯೋಜನಗೊಳಿಸಿ ಯಾವುದೇ ರೀತಿಯ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.