ಜೆಡಿಎಸ್ ಪಕ್ಷ ಸಂಘಟನೆ ಪಣ

ರಾಯಚೂರು.ನ.09- ರಾಯಚೂರು ಜಿಲ್ಲಾ ಜನತಾದಳ ಪಕ್ಷದ ಪ್ರಮುಖ ಪದಾಧಿಕಾರಿಗಳು ಸಭೆ ಜಿಲ್ಲಾ ಅಧ್ಯಕ್ಷ ಎಂ ವಿರೂಪಾಕ್ಷಿ ನೇತೃತ್ವದಲ್ಲಿ ನಂದೇಶ್ವರ ಗುಡಿ ಹತ್ತಿರ ಇರುವ ಸಂಭಾಗಣದಲ್ಲಿ ನಡೆಯಿತು ಪ್ರಾಸ್ತಾವಿಕವಾಗಿ ಮಾತನಾಡಿ
ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲರು ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮಾಡುವುದು ಅವಶ್ಯಕತೆ ಇದೆ ಈಗಾಗಲೇ ಎಲ್ಲ ಕಡೆ ನಗರಸಭೆ ಮತ್ತು ಪುರಸಭೆಗಳಲ್ಲಿ ಅಧಿಕಾರ ಪಡೆದುಕೊಂಡದ್ದೇವೆ. ಈಗ ಪಕ್ಷ ಸಂಘಟನೆ ಎಲ್ಲ ನಾಯಕರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಯುವ ಅಧ್ಯಕ್ಷ ಎಂ.ಪವನಕುಮಾರ ಮಾತನಾಡಿ ರಾಯಚೂರು ನಗರದಲ್ಲಿ ಕಳೆದ ಬಾರಿ ಕಳೆಪ ಮಟ್ಟದ ವಿಧಾನ ಸಭೆ ಚುನಾವಣೆ ಪ್ರದರ್ಶನದಿಂದ ಪಕ್ಷಕ್ಕೆ ತುಂಬಾ ನಷ್ಟ ಅನುಭವಿಸಿದೆ ಮತ್ತೆ ನಗರದಲ್ಲಿ ಜೆಡಿಎಸ್ ಶಾಸಕ ಗೆಲುವು ಸಾಧಿಸುವುದಕ್ಕೆ ಸಂಘಟನೆ ಮಾಡುವದು ಅಗತ್ಯವಿದೆ ಎಂದರು. ಯೂಸುಫ್ ಖಾನ್ ಹಿರಿಯ ಮುಖಂಡರು ಮಾತನಾಡಿ ಅಲ್ಪಸಂಖ್ಯಾತರು ಜೆಡಿಎಸ್ ಬಗ್ಗೆ ಒಲವು ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಸಂಘಟನೆ ಮಾಡುತ್ತನೆ ತಿಮ್ಮರೆಡ್ಡಿ ನಗರ ಸಭೆ ಸದಸ್ಯ ಜೆಡಿಎಸ್ ಪಕ್ಷದ ಹೈಕಮಾಂಡ್ ಗೌರವ ನೀಡಿದ್ದು ಹೆಮ್ಮೆಯ ವಿಷಯ ಎಂದರು
ರವಿಪಾಟೇಲ್ ಹಿರಿಯ ಮುಖಂಡರು ಮಾತನಾಡಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಜೆಡಿಎಸ್ ಪಕ್ಷ ರಣತಂತ್ರ ರೂಪಿಸುವುದು ಅಗತ್ಯ ಗ್ರಾಮಾಂತರ ಪ್ರದೇಶದಲ್ಲಿ ಮತ್ತೆ ಪಕ್ಷ ಸಂಘಟನೆ ಮಾಡಲಾಗುವುದು ಎಂದರು
ನಗರ ಅಧ್ಯಕ್ಷ ತಿಮ್ಮರೆಡ್ಡಿ ಮಾತನಾಡಿ ಪಕ್ಷದ ವರಿಷ್ಠರ ನಿರ್ಧಾರ ಬದ್ಧವಾಗಿ ಅವರು ಹೇಳಿದಂತೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದೇನೆ ಪಕ್ಷದ ಸಿದ್ಧಾಂತ ಬೆಲೆ ನೀಡುತ್ತನೆಂದರು.
ಜಿಲ್ಲಾ ಯುವ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ ಈಗಾಗಲೇ ಪಕ್ಷದಿಂದ ಹೋರಾಟ ಮಾಡ್ತದ್ದೇವೆ ಈಗ ಜೆಡಿಎಸ್ ಪಕ್ಷ ಸಂಘಟನೆ ಪಣತೊಟ್ಟು ಪದಾಧಿಕಾರಿಗಳು ಕೆಲಸ ಮಾಡಬೇಕು ರಾಯಚೂರು ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿ ಶಾಸಕರ ನೇತೃತ್ವದಲ್ಲಿ ಸಂಘಟನೆ ಮಾಡಲಾಗುವುದು ಈ ನಿಟ್ಟಿನಲ್ಲಿ ಕಾರ್ಯಕತರು ಪಕ್ಷ ಕಟ್ಟಲು ಸಿದ್ದರಾಗಬೇಕು ಎಂದರು
ಈ ಸಂದರ್ಭದಲ್ಲಿ ರಾಜ್ಯ ಪ್ರ. ಕಾರ್ಯದರ್ಶಿ ಲಕ್ಷಿಪತಿ ಗಾಣದಳ,ಮುಖಂಡರಾದ ಜಂಬುನಾಥ ಯಾದವ್, ರಾಮಕೃಷ್ಣ, ದಾನಪ್ಪ ಯಾದವ ಅಕ್ಬರ್ ನಾಗುಂಡಿ, ವಿಶ್ವ ನಾಥ ಪಟ್ಟಿ, ನರಸಿಂಹಲು, ಅಮ್ಜದ್, ಅಮೇರಶ ಆಶಾಪೂರ, ಆದಿರಾಜ್ . ಮೂಕಯ್ಯ,ರಾಮನಗೌಡ, ಅಲಂಬಾಬು, ನವಾಜ್,ಬಾಬು,ಕುಮಾರ ಸ್ವಾಮಿ,ಶಾಲಂ ಸಾದಿಕ್ ಉಪಸ್ಥಿತರಿದ್ದರು.