ಜೆಡಿಎಸ್ ಪಕ್ಷ ಬಡವರಿಗಾಗಿ ದುಡಿಯುವ ಪಕ್ಷ : ಎಚ್.ಡಿ.ಕೆ.

ಬಸವಕಲ್ಯಾಣ: ಜಾತ್ಯಾತಿತ ಜನತಾ ದಳ (ಜೆ.ಡಿ.ಎಸ್) ಪಕ್ಷವು ಬಡವರಿಗಾಗಿ ಮತ್ತು ಹಿಂದುವಳಿದವರಿಗಾಗಿ ದುಡಿಯುವ ಪಕ್ಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರು ಹೇಳಿದರು.
ವಿಧಾನ ಸಭೆ ಉಪ ಚುನಾವಣೆ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಇಂದು ನಗರಕ್ಕೆ ಆಗಮಿಸಿದ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಕಾಂಗ್ರೇಸ್ ಅಭ್ಯರ್ಥಿಗಳು ಗೆದ್ದಿವೆ. ಬಿಜೆಪಿ ಸರ್ಕಾರ ಇದ್ದಾಗ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಸರ್ಕಾರಗಳು ಆಡಳಿತದಲ್ಲಿದ್ದರೆ ಅವರು ಹೆಚ್ಚು ಸಶಕ್ತರಾಗಿರುತ್ತಾರೆ. ಆದರೆ ಈ ಸಲ ಬಸವಕಲ್ಯಾಣ ಉಪ ಚುನಾಣವೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಿರಾಯಸವಾಗಿ ಗೆಲವು ಸಾಧಿಸುವುದರ ಮೂಲಕ ಹೊಸ ಅಧ್ಯಾಯ ಪ್ರಾರಂಭಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಸೈಯದ ಯಶ್ರಬ ಅಲಿ ಖಾದ್ರಿ, ಮಾಜಿ ಸಚಿವ ಬಂಡೆಪ್ಪ ಖಾಶಿಂಪುರ, ತಾಲ್ಲೂಕು ಅಧ್ಯಕ್ಷ ಶಬ್ಬಿರ ಪಾಶಾ, ಸುಶೀಲ ಅವಸ್ಥಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.