ಜೆಡಿಎಸ್ ಪಕ್ಷವನ್ನು ಬಲಪಡಿಸಲು ಸಂಡೂರುಕ್ಷೇತ್ರದಲ್ಲಿ ಪಾದಯಾತ್ರೆ-ಸೋಮಲಿಂಗನಗೌಡ್ರು.


ಸಂಜೆವಾಣಿ ವಾರ್ತೆ
ಕುರುಗೋಡು.ಜ.13: ಜಾತ್ಯಾತೀಯ ಜನತಾದಳ ಜೆಡಿಎಸ್ ಪಕ್ಷವನ್ನು ಬಲಪಡಿಸಲು  ಜೆಡಿಎಸ್‍ಸಂಡೂರುಕ್ಷೇತ್ರದ ಅದ್ಯಕ್ಷ ಸೋಮಪ್ಪ ಇವರ ನೇತೃತ್ವದಲ್ಲಿ ಪಂಚರತ್ನರಥಯಾತ್ರೆಯ ನಿಮಿತ್ತ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಪಕ್ಷದ ಬಳ್ಳಾರಿ ಜಿಲ್ಲಾಘಟಕದ ಅದ್ಯಕ್ಷ ಸೋಮಲಿಂಗನೌಡ ಹೇಳಿದರು.
ಅವರು ಸಮೀಪದ ಎಳುಬೆಂಚೆ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯ ನಿಮಿತ್ತ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಈ ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿಯಾಗಿಲ್ಲ, ಆದ್ದರಿಂದ ಕುಮಾರಣ್ಣನವರ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂಪೂರ್ಣ ಗ್ರಾಮೀಣ ಅಭಿವೃದ್ದಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಡೂರು ಕ್ಷೇತ್ರದ ಅದ್ಯಕ್ಷ ಹಾಗು ಸಂಡೂರು ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎನ್. ಸೋಮಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಬಡವರಿಗೆ ಆಶ್ರಯ ಕಲ್ಪಿಸುವಲ್ಲಿ, ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ, ತುಳಿತಕ್ಕೆ ಒಳಗಾದಂತಹ ದೀನ ದಲಿತರ ಮೇಲತ್ತಲು ಸಲುವಾಗಿ, ಸರ್ವ ಜನಾಂಗಕ್ಕೂ ಕೂಡ ಒಳ್ಳೆಯ ಸುಸಜ್ಜಿತ ವಾತಾವರಣ ಸೃಷ್ಟಿಸಬೇಕು ಎನ್ನುವ ಛಲ ನನ್ನದು ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್ ಸೋಮಪ್ಪ ಹೇಳಿದರು. ನಾನೊಬ್ಬ ಬಡ ರೈತನ ಮಗ ನನಗೆ ಅಧಿಕಾರ ಆಸ್ತಿ ಅಂತಸ್ತು ಮುಖ್ಯವಲ್ಲ, ಸುಮಾರು ವರ್ಷಗಳಿಂದ ನಾನು ಜನರ ಸೇವೆಯಲ್ಲಿದ್ದೇನೆ.  ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಿ, ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ನುಡಿದರು. ಪ್ರಾರಂಭದಲ್ಲಿ ಏಳುಬೆಂಚಿ ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬಹುಮತದಿಂದ ಆರಿಸಿ ತನ್ನಿ ಎಂದು ಮನವಿಮಾಡಿದರು.
ಜೆಡಿಎಸ್ ಪಕ್ಷದ ಪ್ರಚಾರಸಮಿತಿ ಅದ್ಯಕ್ಷ ವಾದಿರಾಜಶೆಟ್ಟಿ, ಕಾರ್ಮಿಕಘಟಕದ ಅದ್ಯಕ್ಷ ಬಾವಿಶಿವುಕುಮಾರ್, ರಾಜ್ಯಕಾರ್ಯದರ್ಶಿ ವಿಜಯಕುಮಾರಗೌಡ, ಜಿಲ್ಲಾ ಉಪಾದ್ಯಕ್ಷ ಶ್ರೀನಿವಾಸ್, ಮಹಿಳಾಘಟಕದ ಅದ್ಯಕ್ಷೆ ಗೌಸಿಯಾಬೇಗಂ, ವಿಜಯಕುಮಾರಿ, ಕರುಣಾಮೂರ್ತಿಸ್ವಾಮಿ, ಸದಾಶಿವಯ್ಯಸ್ವಾಮಿ, ಚೆನ್ನಯ್ಯಸ್ವಾಮಿ, ಕುರುಬರ ನಾಗಪ್ಪ, ಬಸವಣ್ಣಯ್ಯ ಸ್ವಾಮಿ, ಪುರಬಸಪ್ಪ, ಡಿ. ಆಂಜನೇಯ, ಪಲ್ಗುಣ, ಗಾದಿ, ಮಾರಣ್ಣ, ಪಲ್ಲೇದ ಪ್ರಕಾಶ್, ಗೋಡೆ ಏರಿಸ್ವಾಮಿ, ಚೋರನೂರು ಅಧ್ಯಕ್ಷರು ಖಾದರ್ ಬೈ, ಶಕೀರ, ಕುರೆಕುಪ್ಪ ಹಾದಿಮನೆ ಲಿಂಗಪ್ಪ ಮತ್ತು ಜೆಡಿಎಸ್ ಕಾರ್ಯಕರ್ತರು ಇದ್ದರು.